ಐರಾವತ ಯೋಜನೆ: 75 ಕಾರುಗಳ ವಿತರಣೆ

ಶುಕ್ರವಾರ, ಮಾರ್ಚ್ 22, 2019
26 °C

ಐರಾವತ ಯೋಜನೆ: 75 ಕಾರುಗಳ ವಿತರಣೆ

Published:
Updated:

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಯೋಜನೆಗಳಾದ ಐರಾವತ ಹಾಗೂ ಉನ್ನತಿ ಕಾರ್ಯಕ್ರಮಗಳಡಿ 96 ಫಲಾನುಭವಿಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಬುಧವಾರ ಸೌಲಭ್ಯಗಳನ್ನು ವಿತರಿಸಿದರು.

ಐರಾವತ ಯೋಜನೆಯಡಿ ಉಬರ್ ಟ್ಯಾಕ್ಸಿ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ 75 ಮಂದಿ ತಲಾ ₹ 5 ಲಕ್ಷ ಮೊತ್ತದ ಕಾರುಗಳನ್ನು ಪಡೆದು ಅವುಗಳ ಒಡೆಯರಾದರು. ಒಟ್ಟಾರೆ ಈ ಕಾರ್ಯಕ್ರಮದಡಿ ವಾಹನಗಳ ಖರೀದಿಗೆ ₹3.75 ಕೋಟಿ ವೆಚ್ಚ ಮಾಡಲಾಗಿದೆ. ಉನ್ನತಿ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಯುವಜನರ ನವೋದ್ಯಮಗಳಿಗೆ ಧನಸಹಾಯ ಮಾಡಲಾಗುತ್ತಿದ್ದು, 21 ಮಂದಿಗೆ ಸಚಿವರು ₹3.75 ಕೋಟಿ ನಗದು ಸಹಾಯದ ಚೆಕ್ ವಿತರಿಸಿದರು.

‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಯುವಜನರು ಆರ್ಥಿಕರಾಗಿ ಸಬಲರಾಗಬೇಕೆಂಬುದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯಾಗಿದ್ದು, ಅದರಂತೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ವಿನೂತನ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಿಯಾಂಕ್‌ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !