ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಿಕ್ ಕಾನ್‌ನಲ್ಲಿ ಪ್ರತ್ಯಕ್ಷವಾದ ಕಾರ್ಟೂನ್‌ ಪಾತ್ರಗಳು

Last Updated 20 ನವೆಂಬರ್ 2022, 12:58 IST
ಅಕ್ಷರ ಗಾತ್ರ

ಬೆಂಗಳೂರು: ಫ್ಯಾಂಟಮ್‌, ಸ್ಪೈಡರ್‌ಮ್ಯಾನ್‌, ಡೋರಾ, ಶಿವ, ಹನುಮಾನ್‌... ಹೀಗೆ ಹತ್ತಾರು ಕಾರ್ಟೂನ್‌ ಪಾತ್ರಗಳು ಇಲ್ಲಿ ನೈಜವಾಗಿ ಪ್ರತ್ಯಕ್ಷವಾದಂತಿತ್ತು.

ನಗರದ ವೈಟ್‌ಫೀಲ್ಡ್‌ನ ಕೈಗಾರಿಕಾ ಪ್ರದೇಶದಲ್ಲಿರುವ ‘ಕಾಮಿಕ್‌ ಕಾನ್‌’ ಆವರಣದಲ್ಲಿ ಪ್ರಸಕ್ತ ವರ್ಷದ‘ಬೆಂಗಳೂರು ಕಾಮಿಕ್ ಕಾನ್-2022’ನಲ್ಲಿ ಈ ಎಲ್ಲ ಪಾತ್ರಗಳ ವೇಷಧಾರಿಗಳು ಕಾಣಿಸಿಕೊಂಡರು. ಪುಟಾಣಿಗಳಿಂದ ಹಿಡಿದು ಹರೆಯದವರವರೆಗೂ ಕಾರ್ಟೂನ್‌ ಪ್ರಿಯರು ಈ ವೇಷಗಳನ್ನು ತೊಟ್ಟು ಆನಂದಿಸಿದರು. ಹಲವಾರು ಆಸಕ್ತರು ಪ್ರದರ್ಶನ ಮಳಿಗೆಗಳಲ್ಲಿ ಈ ಕಾರ್ಟೂನ್‌ ಪಾತ್ರಗಳ ತಾಂತ್ರಿಕ ವಿಷಯಗಳನ್ನು ತಿಳಿದುಕೊಳ್ಳಲು ಮುಂದಾದರು.

ಮಳಿಗೆಯೊಂದರಲ್ಲಿ ಮೋಷನ್‌ ಗ್ರಾಫಿಕ್ಸ್‌ ತಂತ್ರಾಂಶ ‘ರಿವರ್‌ ಕಾಮಿಕ್ಸ್‌’ ಗಮನ ಸೆಳೆಯಿತು. ಸಂಗೀತ, ಧ್ವನಿ ಪರಿಣಾಮಗಳು ಮತ್ತು ಗ್ರಾಫಿಕ್‌ ವಿಡಿಯೋ/ ಪರಿಣಾಮಗಳನ್ನು ಈ ಅಪ್ಲಿಕೇಷನ್ ಹೊಂದಿದೆ. ಭಾರತದ ಮೊದಲ ಮೋಷನ್‌ ಗ್ರಾಫಿಕ್ಸ್‌ ಅಪ್ಲಿಕೇಷನ್‌ ಎಂದೂ ಈ ಮನೋರಂಜನಾ ತಂತ್ರಾಂಶಗಳ ಕಂಪನಿ ಹೇಳಿಕೊಂಡಿದೆ.

‘‘ರಿವರ್‌ ಕಾಮಿಕ್ಸ್‌’ ಪ್ರೇಕ್ಷಕರಿಗೆ ವರ್ಧಿತ ಧ್ವನಿ, ಚಲನೆಯ ವಿಶಿಷ್ಟತೆಗಳ ಮೂಲಕ ನಮ್ಮ ಕಲ್ಪನೆಗೆ ಜೀವ ತುಂಬಲು ತಾಂತ್ರಿಕ ನೆರವು ನೀಡುತ್ತದೆ. ಧ್ವನಿ, ಸಂಗೀತ, ವಿಶೇಷ ಪರಿಣಾಮಗಳ ಭಂಡಾರವೂ ಇದರಲ್ಲಿದೆ. ಭಾರತ ಮತ್ತು ವಿಶ್ವದ ಇತಿಹಾಸ, ಸಾಂಸ್ಕೃತಿಕ-ಆಧಾರಿತ ಕಂಟೆಂಟ್‌ನ ವ್ಯಾಪಕ ಪ್ರಕಾರಗಳ ಕಥಾ ಸೃಷ್ಟಿಗೆ ಅವಕಾಶ ಕಲ್ಪಿಸಿದೆ. ಈ ಅಪ್ಲಿಕೇಶನ್‌ಗೆ ವಾರ್ಷಿಕ ₹ 299 ಚಂದಾ ದರವಿದೆ’ ಎಂದು ರಿವರ್‌ಕಾಮಿಕ್ಸ್‌ ಸಿಇಒ ಮತ್ತು ಸಂಸ್ಥಾಪಕ ಜೆ.ಎಂ. ಥಾಕರ್ ಹೇಳಿದರು.

ಬೇರೇನಿತ್ತು ಕಾಮಿಕ್‌ ಕಾನ್‌ನಲ್ಲಿ?

‘ಬಾಂಬೆ ಲೋಕಲ್‌’ ಹಿಪ್‌ – ಹಾಪ್‌ ತಂಡ ವಿಶೇಷ ಪ್ರದರ್ಶನ ನೀಡಿತು.ಹಿಪ್-ಹಾಪ್ ಕಲಾವಿದರಾದ ಗ್ರಾವಿಟಿ, ಶೇಕ್ಸ್‌ಪಿಯರ್, ಫರ್ಹಾನ್ ಬೀಟ್ ಬಾಕ್ಸರ್ಸ್, ಡಿ-ಸೈಫರ್, ಬೀಟ್ ರಾ ಅವರ ಗೀತ ಗಾಯನ ಕೇಳುಗರಿಗೆ ಮುದ ನೀಡಿತು.

ಇಲ್ಲಿ ಹೊಸ ಮೋಜಿನ ಆಟಗಳು, ಕಾರ್ಟೂನ್‌ಗಳು ಗಮನ ಸೆಳೆದವು. ಮಕ್ಕಳು ಇಲ್ಲಿ ಪುಟ್ಟ ಉಡುಗೊರೆಗಳನ್ನು ಪಡೆದು ಸಂಭ್ರಮಿಸಿದರು. ಪುಟ್ಟ ಆಟಗಳಲ್ಲಿ ವಿಜೇತರಿಗೆ ಬಹುಮಾನವನ್ನೂ ಕೊಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT