ಬೆಂಗಳೂರು: ಉದ್ಯಮಿ ಅಜೀಮ್ ಪ್ರೇಮ್‌ಜಿ, ಅವರ ಪತ್ನಿ ಯಾಸ್ಮಿನ್ ಎ ಪ್ರೇಮ್‌ಜಿ ಮತ್ತು ಪಿ.ವಿ ಶ್ರೀನಿವಾಸನ್ ವಿರುದ್ಧ ಸಲ್ಲಿಕೆಯಾಗಿದ್ದ ಎರಡು ಖಾಸಗಿ ದೂರುಗಳನ್ನು ಹೈಕೋರ್ಟ್ ರದ್ದುಪಡಿಸಿದೆ.

‘ಮೂರು ಕಂಪನಿಗಳ ಆಸ್ತಿಯನ್ನು ಟ್ರಸ್ಟ್‌ಗೆ ವರ್ಗಾಯಿಸಿಕೊಳ್ಳಲಾಗಿದೆ. ಕಂಪನಿ ಕಾಯ್ದೆ 2013ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಚೆನ್ನೈ ಮೂಲದ ಇಂಡಿಯನ್ ಅವೇಕ್ ಫಾರ್ ಟ್ರಾನ್ಸ್‌ಪರೆನ್ಸಿ ಸಂಸ್ಥೆ ದೂರು ದಾಖಲಿಸಿತ್ತು.

‘ಮೂರು ಕಂಪನಿಗಳಿಗೆ ಅಜೀಮ್ ಪ್ರೇಮ್‌ಜಿ ಮತ್ತು ಇನ್ನಿಬ್ಬರು ನಿರ್ದೇಶಕರಾಗಿದ್ದಾರೆ. ಎಲ್ಲಾ ಷೇರುಗಳೂ ಕಂಪನಿಯ ಒಡೆತನದಲ್ಲೇ ಇವೆ. ಈ ನಡುವೆ ಮೂರು ಕಂಪನಿಯ ಆಸ್ತಿಯನ್ನು ಪ್ರೇಮ್‌ಜಿ ದಂಪತಿ ಒಡೆತನದ ಟ್ರಸ್ಟ್‌ಗೆ ವರ್ಗಾಯಿಸಿಕೊಳ್ಳಲಾಗಿದೆ’ ಎಂದು ದೂರಿನಲ್ಲಿ ತಿಳಿಸಿತ್ತು.

‘ಒಂದು ವೇಳೆ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದರೆ ಸಂಪೂರ್ಣ ಸ್ವತ್ತನ್ನು ಸರ್ಕಾರ ವಶಕ್ಕೆ ಪಡೆಯಬಹುದಾಗಿತ್ತು. ಆದರೆ, ಈಗ ಅವಕಾಶ ಇಲ್ಲವಾಗಲಿದೆ’ ಎಂದು ಅರ್ಜಿದಾರರು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.