ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ವರದಿ ಅಸಮರ್ಪಕ: ವಿಶ್ವ ವಿಪ್ರತ್ರಯೀ ಪರಿಷತ್

Published 11 ಜುಲೈ 2023, 16:24 IST
Last Updated 11 ಜುಲೈ 2023, 16:24 IST
ಅಕ್ಷರ ಗಾತ್ರ

ಬೆಂಗಳೂರು: ‘ಎಚ್. ಕಾಂತರಾಜ ಆಯೋಗ ಸಿದ್ಧಪಡಿಸಿರುವ ಜಾತಿ ಗಣತಿಯ ಅಸಮರ್ಪಕ ಮತ್ತು ಅವೈಜ್ಞಾನಿಕ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಬಾರದು. ಆರ್ಥಿಕ ದುರ್ಬಲ ವರ್ಗಗಳ ಮೀಸಲಾತಿಯನ್ನು (ಇಡಬ್ಲ್ಯುಎಸ್‌) ಬ್ರಾಹ್ಮಣರಿಗೆ ಅನ್ವಯಿಸುವಂತೆ ಕೂಡಲೇ ಜಾರಿ ಮಾಡಬೇಕು’ ಎಂದು ವಿಶ್ವ ವಿಪ್ರತ್ರಯೀ ಪರಿಷತ್ ಆಗ್ರಹಿಸಿದೆ.

ಈ ಸಂಬಂಧ ಪರಿಷತ್ ಇದೇ 16ರಂದು ಬೆಳಿಗ್ಗೆ 11 ಗಂಟೆಗೆ ಶೇಷಾದ್ರಿ ರಸ್ತೆಯಲ್ಲಿರುವ ಬಬ್ಬೂರುಕಮ್ಮೆ ಸೇವಾ ಸಮಿತಿ ಸಭಾ ಭವನದಲ್ಲಿ ಬೃಹತ್ ಸಭೆ ಆಯೋಜಿಸಿದೆ. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್‌. ಕುಮಾರ್ ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. 

‘ಆಯೋಗವು ಸರ್ಕಾರಕ್ಕೆ ಸಲ್ಲಿಸುವ ವರದಿಯಲ್ಲಿ ಬ್ರಾಹ್ಮಣ ಎಂಬ ಶಿರೋನಾಮೆಗೆ ಒಂದು ಕ್ರಮ ಸಂಖ್ಯೆಯನ್ನು ನೀಡಿ, ಎಲ್ಲಾ ಬ್ರಾಹ್ಮಣ ಉಪಜಾತಿಗಳನ್ನು ಅದರ ಅಡಿಯಲ್ಲಿ ಪಟ್ಟಿ ಮಾಡಿದರೆ ಉಪಯುಕ್ತವಾಗುತ್ತದೆ. ಕಾಂತರಾಜ ಆಯೋಗವು 2015ರಿಂದ 2018ರವರೆಗೆ ನಡೆಸಿದ ಜಾತಿ ಗಣತಿಯ ವರದಿಯನ್ನು ರಾಜ್ಯಸರ್ಕಾರ ತರಾತುರಿಯಲ್ಲಿ ಅಂಗೀಕರಿಸುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ. ಆಯೋಗವು ಸಿದ್ಧಪಡಿಸಿರುವ ಜಾತಿ ಉಪಜಾತಿಗಳ ಅನಧಿಕೃತ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬ್ರಾಹ್ಮಣ ಸಮುದಾಯದ 43 ಉಪಜಾತಿಗಳ ಅನಧಿಕೃತ ಪಟ್ಟಿಯನ್ನು ಪರಿಶೀಲಿಸಿದಾಗ ಬ್ರಾಹ್ಮಣರ ಉಪಜಾತಿಗಳನ್ನು ಬ್ರಾಹ್ಮಣರಿಂದಲೇ ಪ್ರತ್ಯೇಕಿಸಿ, ಬ್ರಾಹ್ಮಣರ ಜನಸಂಖ್ಯೆ ಕಡಿಮೆಯಿದೆ ಎಂದು ಚಿತ್ರಿಸುವ ಷಡ್ಯಂತ್ರ ಮಾಡಲಾಗಿದೆ’ ಎಂದು ಪರಿಷತ್ ಅಧ್ಯಕ್ಷ ರಘುನಾಥ್ ಎಸ್. ಆರೋಪಿಸಿದ್ದಾರೆ.

‘ಕಾಂತರಾಜ ಆಯೋಗ ಸಿದ್ಧಪಡಿಸಿರುವ ಅಸಮರ್ಪಕ ವರದಿಯನ್ನು ಅಂಗೀಕರಿಸಿದರೆ ಕೇಂದ್ರ ಸರ್ಕಾರ ತಂದಿರುವ ಇಡಬ್ಲ್ಯುಎಸ್‌ ಮೀಸಲಾತಿಯನ್ನು ಬ್ರಾಹ್ಮಣ ಸಮುದಾಯಕ್ಕೆ ವಂಚಿಸಿದಂತಾಗುತ್ತದೆ. ಆಯೋಗದ ಜಾತಿ ಗಣತಿಯನ್ನು ಮತ್ತೊಮ್ಮೆ ಪರಿಶೀಲಸಬೇಕು. ಇಡಬ್ಲ್ಯುಎಸ್‌ ಮೀಸಲಾತಿಯನ್ನು ಕೂಡಲೇ ಜಾರಿ ಮಾಡಬೇಕು’ ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT