ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾದ ಡ್ರಗ್ಸ್ ಪೆಡ್ಲರ್ಸ್ ಬಂಧನ

ಕಾಲೇಜು ವಿದ್ಯಾರ್ಥಿಗಳು, ಖಾಸಗಿಕಂಪನಿಗಳ ಉದ್ಯೋಗಿಗಳಿಗೆ ಮಾರಾಟ
Last Updated 19 ಸೆಪ್ಟೆಂಬರ್ 2020, 19:50 IST
ಅಕ್ಷರ ಗಾತ್ರ

ಬೆಂಗಳೂರು: ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೆಲ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದಡಿ ನೈಜೀರಿಯಾದ ಇಬ್ಬರು ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ನಾನಸೊ ಜೋಚಿನ್ (36) ಹಾಗೂ ತ್ರವೋರಿ ಬೆನ್ (25) ಬಂಧಿ ತರು. ಅವರಿಂದ ₹ 10 ಲಕ್ಷ ಮೌಲ್ಯದ 25 ಎಲ್‌ಎಸ್‌ಡಿ ಸ್ಟ್ರಿಪ್ಸ್ ಹಾಗೂ 134 ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

‘ವೈದ್ಯಕೀಯ ಚಿಕಿತ್ಸೆ ಕಾರಣ ನೀಡಿ ವೀಸಾ ಪಡೆದು 2017ರಲ್ಲಿ ನಗರಕ್ಕೆ ಬಂದಿದ್ದ ಆರೋಪಿಗಳು, ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದರು. ಇವರ ವಿರುದ್ಧ ಕೆ.ಆರ್.ಪುರ ಹಾಗೂ ರಾಮಮೂರ್ತಿನಗರ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಜೈಲಿಗೂ ಹೋಗಿ ಬಂದಿದ್ದ ಆರೋಪಿಗಳು, ಶುಕ್ರವಾರ ರಾಮಮೂರ್ತಿನಗರದದಲ್ಲಿ ಡ್ರಗ್ಸ್ ಮಾರಾಟ ಮಾಡಲು ಬಂದಿದ್ದರು. ಅದೇ ವೇಳೆಯೇ ದಾಳಿ ಮಾಡಿ ಬಂಧಿಸಲಾಗಿದೆ’ ಎಂದು ತಿಳಿಸಿದರು.

ಶಾಲಾ–ಕಾಲೇಜು ಬಳಿ ಡ್ರಗ್ಸ್ ಮಾರಾಟ: ಮೂವರ ಸೆರೆ

ಬಸವೇಶ್ವರನಗರ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರುತ್ತಿದ್ದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದು, 2 ಕೆ.ಜಿ 150 ಗ್ರಾಂ ಗಾಂಜಾ ಮತ್ತು ಕಾರು ಜಪ್ತಿ ಮಾಡಿದ್ದಾರೆ.

ನಾಗದೇವನಹಳ್ಳಿಯ ಆರ್.ಬಿ. ಮದನ್‌ಕುಮಾರ್ (22), ಕೆ.ಪಿ. ಅಗ್ರಹಾರದ ಹೇಮಂತ್ ಕುಮಾರ್ (20) ಹಾಗೂ ಬಿ. ತೇಜಸ್ (20) ಬಂಧಿತರು.

'ಆರೋಪಿ ಮದನ್ ಕುಮಾರ್ ತನ್ನ ಕಾರಿನಲ್ಲೇ ಗಾಂಜಾ ತಂದು, ಶಿವನಗರ ಸಮೀಪದ ಶಾಲೆಯೊಂದರ ಬಳಿ ಮಾರುತ್ತಿದ್ದ. ಆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಪೊಲೀಸರ ತಂಡ, ದಾಳಿ ಮಾಡಿ ಆತನನ್ನು ಬಂಧಿಸಿದೆ.
ಆತ ನೀಡಿದ್ದ ಮಾಹಿತಿಯಂತೆ ಉಳಿದಿಬ್ಬರನ್ನು ಸೆರೆ ಹಿಡಿದಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

‘ಆರೋಪಿಗಳು ಹಲವು ವರ್ಷಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಗಾಂಜಾ ಮಾರುತ್ತಿದ್ದರು. ಅವರಿಗೆ ಗಾಂಜಾ ಪೂರೈಸುತ್ತಿದ್ದ ಪೆಡ್ಲರ್‌ಗಾಗಿ ಹುಡುಕಾಟ ನಡೆದಿದೆ’ ಎಂದೂ ಡಿಸಿಪಿ ಸಂಜೀವ್
ಪಾಟೀಲ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT