ಬೆಂಗಳೂರು: ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರರಿಂದ ಜಪ್ತಿ ಮಾಡಿರುವ 12 ಮೊಬೈಲ್‌ಗಳಿಂದ ಸುಮಾರು 300 ಜಿ.ಬಿ (ಗಿಗಾಬೈಟ್) ದತ್ತಾಂಶವನ್ನು ಸಿಸಿಬಿ ಪೊಲೀಸರು ಹೊರಗೆ ತೆಗೆಸಿದ್ದು (ರಿಟ್ರೀವ್), ಪ್ರಕರಣಕ್ಕೆ ಪೂರಕವಾಗಿರುವ ತಾಂತ್ರಿಕ ಪುರಾವೆ ಸಂಗ್ರಹಿಸಿದ್ದಾರೆ.

ಶಂಕಿತರಾದ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ (30) ಹಾಗೂ ಮೊಹಮ್ಮದ್ ಉಮರ್‌ನನ್ನು ಬಂಧಿಸಿರುವ ಪೊಲೀಸರು, ಇವರೆಲ್ಲರ ಮೊಬೈಲ್ ಕರೆಗಳ ಜಾಡು ಭೇದಿಸಿದ್ದಾರೆ.

ಸುಲ್ತಾನ್‌ಪಾಳ್ಯದ ಮನೆಯೊಂದರ ಮೇಲೆ ಜುಲೈ 18ರಂದು ದಾಳಿ ಮಾಡಿದ್ದ ಪೊಲೀಸರು, 7 ನಾಡ ಪಿಸ್ತೂಲ್, 45 ಗುಂಡುಗಳು, 4 ವಾಕಿಟಾಕಿ ಮಾದರಿಯ ಟ್ರಿಗರ್, 12 ಮೊಬೈಲ್, ಡ್ಯಾಗರ್ ಹಾಗೂ 4 ಗ್ರೆನೇಡ್‌ಗಳನ್ನು ಜಪ್ತಿ ಮಾಡಿದ್ದರು. ಮೊಬೈಲ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿರುವ ಪೊಲೀಸರು, ಅಳಿಸಿ ಹಾಕಿದ್ದ ಹಾಗೂ ಚಾಲ್ತಿಯಲ್ಲಿದ್ದ 300 ಜಿ.ಬಿ ದತ್ತಾಂಶವನ್ನು ತಜ್ಞರ ಮೂಲಕ ಹೊರ ತೆಗೆಸಿದ್ದಾರೆ.

‘ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಬಾಂಬ್ ಸ್ಫೋಟದ ಅಪರಾಧಿ ಟಿ. ನಾಸೀರ್, ಭಯೋತ್ಪಾದನಾ ಕೃತ್ಯಕ್ಕೆ ಜೈಲಿನಲ್ಲಿಯೇ ಸಂಚು ರೂಪಿಸಿ, ಶಂಕಿತರ ಜೊತೆ ಜೈಲಿನಿಂದಲೇ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಸ್ಫೋಟಕ್ಕೆ ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡುತ್ತಿದ್ದ. ಬೇಸಿಕ್ ಮೊಬೈಲ್‌ನಿಂದ ಸಾಮಾನ್ಯ ಕರೆ ಹಾಗೂ ಸ್ಮಾರ್ಟ್ ಮೊಬೈಲ್‌ನಿಂದ ವಾಟ್ಸ್‌ಆ್ಯಪ್, ಇತರೆ ಆ್ಯಪ್ ಬಳಸಿ ಕರೆ ಮಾಡಿರುವುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

‘ಬಾಂಬ್ ಸ್ಫೋಟದ ಸುಳಿವು ಕೊಟ್ಟ ಕರೆ’

‘ಬಾಂಬ್ ಸ್ಫೋಟಿಸಲು ಹಾತೊರೆಯುತ್ತಿದ್ದ ಟಿ. ನಾಸೀರ್, ಜೈಲಿನಿಂದ ಜುಲೈ 16 ಹಾಗೂ 17ರಂದು ಶಂಕಿತ ಉಗ್ರ ಮಹಮ್ಮದ್ ಉಮರ್‌ಗೆ ಹಲವು ಬಾರಿ ಕರೆ ಮಾಡಿದ್ದ. ‘ನಾವೆಲ್ಲರೂ ಸೇರಿ ಧರ್ಮ ರಕ್ಷಿಸಬೇಕಿದೆ. ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಬೇಕಿದೆ. ಎಲ್ಲ ಸ್ಫೋಟಕ ಸಿದ್ಧವಾಗಿಟ್ಟು
ಕೊಳ್ಳಿ. ಬಾಂಬ್ ಸ್ಫೋಟಿಸಬೇಕಾದ ಸ್ಥಳ ಹೇಳುವೆ’ ಎಂದಿದ್ದ. ಈ ಬಗ್ಗೆ ಗೊತ್ತಾಗುತ್ತಿದ್ದಂತೆ ಪೊಲೀಸರು, ಜುಲೈ 18ರಂದು ಸುಲ್ತಾನ್‌ಪಾಳ್ಯದ ಮನೆ ಮೇಲೆ ದಾಳಿ ಮಾಡಿದ್ದರು. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ವಿದೇಶದ ಗ್ರೆನೇಡ್’

‘ಶಂಕಿತ ಉಗ್ರ ಜಾಹೀದ್ ತಬ್ರೇಜ್‌ನ ಕೊಡಿಗೇಹಳ್ಳಿಯ ಮನೆಯಲ್ಲಿ ಸಿಕ್ಕಿರುವ 4 ಗ್ರೆನೇಡ್‌ಗಳನ್ನು ವಿದೇಶದಿಂದ ಕೊರಿಯರ್ ಮೂಲಕ ತರಿಸಲಾಗಿತ್ತೆಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

‘ನಾಸೀರ್, ಜುನೇದ್, ವಿದೇಶದಲ್ಲಿರುವ ವ್ಯಕ್ತಿಗಳಿಂದ ಕೊರಿಯರ್ ಮೂಲಕ ಭಾರತಕ್ಕೆ ಗ್ರೆನೇಡ್ ತರಿಸಿದ್ದರು. ಸಲ್ಮಾನ್ ಎಂಬಾತ ಅದೇ ಗ್ರೆನೇಡ್‌ಗಳನ್ನು ನೆಲಮಂಗಲ ಟೋಲ್‌ಗೇಟ್ ಬಳಿ ಜಾಹೀದ್‌ಗೆ ಕೊಟ್ಟಿದ್ದ’ ಎಂದು ತಿಳಿಸಿವೆ.

ಕೋಡ್ ಬಳಕೆ

‘ಟಿ. ನಾಸೀರ್ ಹಾಗೂ ಶಂಕಿತ ಉಗ್ರರು, ಸಂಭಾಷಣೆ ಸಂದರ್ಭದಲ್ಲಿ ತಮ್ಮದೇ ಕೋಡ್‌ಗಳನ್ನು ಬಳಸಿದ್ದಾರೆ. ಅವುಗಳ ಅರ್ಥವೇನು ಎಂಬುದನ್ನು ಶಂಕಿತರ ಮೂಲಕ ತಿಳಿಯಲಾಗುತ್ತಿದೆ. ಸ್ಫೋಟಕ ಖರೀದಿ ವ್ಯವಹಾರ, ಸ್ಫೋಟಕ ಸಂಗ್ರಹ ಹಾಗೂ ಸ್ಫೋಟದ ಸ್ಥಳಗಳನ್ನು ಗುರುತಿಸುವ ವಿಚಾರವಾಗಿ ಕೋಡ್ ಬಳಸಿ ಮಾತನಾಡಿರುವ ಅನುಮಾನವಿದೆ’ ಎಂದು ಮೂಲಗಳು ತಿಳಿಸಿವೆ.

‘ಶಂಕಿತರಾದ ಸೈಯದ್ ಮುದಾಸೀರ್ ಪಾಷಾ ಹಾಗೂ ಮಹಮ್ಮದ್ ಉಮರ್, ಡ್ರಗ್ಸ್ ಮಾರಾಟದಲ್ಲಿ ಸಕ್ರಿಯರಾಗಿದ್ದ ಮಾಹಿತಿ ಇದೆ. ಈ ಸಂಬಂಧ ಮುದಾಸೀರ್‌ನ ಪ್ರಿಯತಮೆ ಹೇಳಿಕೆ ನೀಡಿದ್ದು, ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.