ರೈತರ ವಿವರವೂ ಲಭ್ಯ: ಈ ತಂತ್ರಾಂಶದಿಂದ ಗಿಡಗಳ ಮಾಹಿತಿ ಜೊತೆಗೆ, ನರ್ಸರಿಗಳಿಂದ ಗಿಡಗಳನ್ನು ಖರೀದಿಸುವ ರೈತರ ಊರು, ತಾಲ್ಲೂಕು, ಜಿಲ್ಲೆಯ ಮಾಹಿತಿ, ಒಂದು ನಿರ್ದಿಷ್ಟ ಅವಧಿಗೆ ಯಾವ ತಳಿ/ಗಿಡ ಎಷ್ಟು ಮಾರಾಟವಾಯಿತು ಎಂಬ ಮಾಹಿತಿಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ನಿರ್ದಿಷ್ಟ ಸಂಖ್ಯೆಯ ಗಿಡ/ತಳಿ ಖರೀದಿಸಿದ ಕೃಷಿಕರನ್ನು ಗುರುತಿಸಬಹುದು. ಯಾವ ತಿಂಗಳಲ್ಲಿ ಎಷ್ಟು ಗಿಡಗಳು ಮಾರಾಟವಾಗಿವೆ ಎಂಬ ವಿವರವನ್ನು ಪಡೆಯಬಹುದೆ. ಇದು ದತ್ತಾಂಶ ವಿಶ್ಲೇಷಣೆಗೂ ಅನುಕೂಲವಾಗಲಿದೆ ಎಂದು ವಿಜ್ಞಾನಿ ಮೋಹನ್ ತಲಕಾಲುಕೊಪ್ಪ ವಿವರಿಸಿದರು.