ಬೆಂಗಳೂರು: ಆರ್ಥಿಕ ವ್ಯವಸ್ಥೆ ಮತ್ತು ಡಿಜಿಟಲ್ ಪರಿವರ್ತನೆಯ ಕ್ಷೇತ್ರಗಳಲ್ಲಿ ಭಾರತ ವಿಶೇಷ ಸಾಧನೆ ಮಾಡಿದ್ದು, ಈಗ ಆಡಳಿತದ ವಿವಿಧ ಹಂತಗಳಲ್ಲಿ ಆಳವಾದ ಸುಧಾರಣೆಯ ಅಗತ್ಯವಿದೆ ಎಂದು ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್ ಸನ್ಯಾಲ್ ಹೇಳಿದರು.

ಚಾಣಕ್ಯ ವಿಶ್ವವಿದ್ಯಾಲಯದ ಯುವ ಪಥದಲ್ಲಿ ‘ಕಾರ್ಯ ವಿಧಾನದಲ್ಲಿ ಸುಧಾರಣೆಗಳು ವಿಕಸಿತ ಭಾರತಕ್ಕೆ ದಾರಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ದೇಶದ ಮುಂದಿನ ಅಭಿವೃದ್ಧಿಗೆ ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆ ಅಗತ್ಯ. ಅಧಿಕಾರಿಶಾಹಿ ವ್ಯವಸ್ಥೆ ಮತ್ತು ಕೆಲಸದ ಪರಿಕ್ರಮಗಳನ್ನು ಸರಳಗೊಳಿಸುವುದು, ನಿರ್ಣಯ ಕೈಗೊಳ್ಳುವ ವೇಗ ಹಾಗೂ ಹೊಣೆಗಾರಿಕೆ ಹೆಚ್ಚಿಸುವುದು ಸುಧಾರಣೆಯ ಪ್ರಮುಖ ಅಂಶವಾಗಿದೆ. ಇದು ಸರ್ಕಾರ ಹಾಗೂ ಖಾಸಗಿ ವಲಯದಲ್ಲಿ ಉತ್ತಮ ಫಲಿತಾಂಶಕ್ಕೆ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕ ಸಂಸ್ಥೆಗಳ ಕಾರ್ಯಕ್ಷಮತೆ ಹೆಚ್ಚಿಸಲು ಉತ್ತಮ ತರಬೇತಿ, ತಂತ್ರಜ್ಞಾನ ಬಳಕೆ ಮತ್ತು ಫಲಿತಾಂಶ ಆಧಾರಿತ ವ್ಯವಸ್ಥೆಗಳನ್ನು ಅನುಸರಿಸುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಇದೇ ವೇಳೆ ಪ್ರೇಕ್ಷಕರ ಜತೆ ಸಂವಾದ ನಡೆಸಿದರು. ಉಪನ್ಯಾಸದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಕೈಗಾರಿಕೋದ್ಯಮಿಗಳು, ನಾಗರಿಕರು ಭಾಗವಹಿಸಿದ್ದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವೈ.ಎಸ್.ಆರ್. ಮೂರ್ತಿ, ಕುಲಾಧಿಪತಿ ಪ್ರೊ. ಎಂ. ಕೆ. ಶ್ರೀಧರ್, ಉಪ ಕುಲಾಧಿಪತಿ ಎಂ. ಪಿ. ಕುಮಾರ್, ಉಪಕುಲಪತಿ ಪ್ರೊ. ಯಶವಂತ ಡೋಂಗ್ರೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.