ಗುರುವಾರ , ಮಾರ್ಚ್ 4, 2021
30 °C

ಬಾಲ್ಯದಲ್ಲಿ ಕೇಳಿದ ಚಂದ್ರನ ಕಥೆ ಹೇಳಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಂದ್ರನ ಕಥೆ ಇಲ್ಲದೆ ಯಾರೊಬ್ಬರ ಬಾಲ್ಯವೂ ಪೂರ್ಣವಾಗುವುದಿಲ್ಲ. ಈ ಕಾರಣಕ್ಕೆ ಚಂದ್ರನ ಕುರಿತ ಕಥೆಗಳನ್ನು ಹೇಳಿ ಎಂದು ‘ಚಂದ್ರಯಾನ–2’ ಉಡಾವಣೆಯ ಹುಮ್ಮಸ್ಸಿನಲ್ಲಿರುವ ಇಸ್ರೊ ಟ್ವಿಟರ್‌ ಮೂಲಕ ‘ಕಥಾಯಾನ’ಕ್ಕೆ ಚಾಲನೆ ನೀಡಿದೆ.

‘ನಿಮ್ಮ ಬಾಲ್ಯದಲ್ಲಿ ಅತ್ಯುತ್ತಮ ಎನಿಸಿದ ಚಂದ್ರನ ಕುರಿತು ಕೇಳಿದ ಕಥೆಗಳನ್ನು ನಮ್ಮ ಜತೆ ಹಂಚಿಕೊಳ್ಳಿ’ ಎಂದು ಟ್ವೀಟ್‌ ಮಾಡಿದ ಬಳಿಕ, ನೂರಾರು ಮಂದಿ ತಮ್ಮದೇ ಆದ ರೀತಿಯಲ್ಲಿ #ChildhoodMemories #Chandrayaan2 #ISROನಲ್ಲಿ  ಕಥೆಗಳನ್ನು ಹಂಚಿಕೊಂಡಿದ್ದಾರೆ.

‘ಶಿವ ತನ್ನ ಮುಡಿಯಲ್ಲಿ ಚಂದ್ರನನ್ನು ಯಾಕೆ ಮುಡಿದುಕೊಂಡಿದ್ದಾನೆ’ಎಂದು ಒಬ್ಬರು ಪ್ರಶ್ನಿಸಿದ್ದಾರೆ.

‘ಚಂದ್ರ ಯಾಕೆ ಸದಾ ನನ್ನನ್ನು ಹಿಂಬಾಲಿಸುತ್ತಾನೆ ಎಂಬ ಕುತೂಹಲ ಕಾಡುತ್ತಿತ್ತು’ ಎಂದು ಹರ್ಷ್‌ ರಂಜನ್ ಎಂಬುವರು ಹೇಳಿಕೊಂಡಿದ್ದರೆ, ‘ಚಂದ್ರ ಪ್ರೇಯಸಿಯಂತೆ ತೋರುತ್ತಾನೆ’ ಎಂದು ಮತ್ತೊಬ್ಬರು ಹೋಲಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು