ಶನಿವಾರ, ಜೂನ್ 25, 2022
25 °C

₹1 ಕೋಟಿ ವಂಚನೆ: ಪದವೀಧರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಸ್ಕೆಟ್ ಮಾರಾಟ ಏಜೆನ್ಸಿಯಲ್ಲಿ ಪಾಲುದಾರಿಕೆ ನೀಡುವುದಾಗಿ ಹೇಳಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ಮನೋಜ್ ಎಂಬು ವರನ್ನು ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಚಾಮರಾಜಪೇಟೆಯ ನಂಜಾಂಬಾ ಅಗ್ರಹಾರ ನಿವಾಸಿ ಮನೋಜ್, ಎಂ.ಕಾಂ ಪದವೀಧರ. ಈತನ ವಿರುದ್ಧ ಐದು ಎಫ್‌ಐಆರ್ ದಾಖಲಾಗಿದ್ದವು. ತಲೆಮರೆಸಿಕೊಂ ಡಿದ್ದ ಆರೋಪಿ, ಹೊರ ರಾಜ್ಯಗಳಲ್ಲಿ ಸುತ್ತಾಡುತ್ತಿದ್ದ. ವಿಳಾಸ ಪತ್ತೆ ಮಾಡಿ ಇತ್ತೀಚೆಗೆ ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪ್ರತಿಷ್ಠಿತ ಕಂಪನಿಗಳ ಬಿಸ್ಕೆಟ್ ಮಾರಾಟ ಏಜೆನ್ಸಿ ನಡೆಸುತ್ತಿರುವು ದಾಗಿ ಆರೋಪಿ ಹೇಳುತ್ತಿದ್ದ. ವ್ಯವಹಾರ ವೃದ್ಧಿಸಲು ಹಣಕಾಸಿನ ನೆರವು ನೀಡಿದರೆ, ಏಜೆನ್ಸಿಯಲ್ಲಿ ಸಮ ಪಾಲುದಾರಿಕೆ ಕೊಡುವುದಾಗಿ ತಿಳಿಸುತ್ತಿದ್ದ. ಆತನ ಮಾತು ನಂಬಿ ಐವರು, ₹ 1 ಕೋಟಿ ನೀಡಿದ್ದರು. ಹಣ ಪಡೆದಿದ್ದ ಆರೋಪಿ, ನೀಡದೇ ನಾಪತ್ತೆ ಯಾಗಿದ್ದ’ ಎಂದೂ ತಿಳಿಸಿವೆ.

‘ಆರೋಪಿಯ ತಂದೆ, ಕೆಎಸ್‌ ಆರ್‌ಟಿಸಿ ನೌಕರರಾಗಿದ್ದರು. ಅವರು ತೀರಿಕೊಂಡ ಬಳಿಕ ಅನುಕಂಪದ ಆಧಾರದಲ್ಲಿ ಮಗನಿಗೆ ಕೆಲಸ ಸಿಕ್ಕಿತ್ತು. ಕೆಲಸಕ್ಕೆ ಹೋಗದ ಆರೋಪಿ, ಬಿಸ್ಕೆಟ್ ಮಾರಾಟ ಏಜೆನ್ಸಿ ಹೆಸರಿನಲ್ಲಿ ಜನರನ್ನು ವಂಚಿಸಲಾರಂಭಿಸಿದ್ದ. ಸದ್ಯ ಐವರು ಮಾತ್ರ ದೂರು ನೀಡಿದ್ದು, ಬೇರೆ ಯಾರಾದರೂ ವಂಚನೆಗೀಡಾಗಿದ್ದರೆ, ದೂರು ನೀಡ ಬಹುದು’ ಎಂದೂ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು