ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರಕಲಾ ಪರಿಷತ್ತಿನಲ್ಲಿ ಜ. 7 ರಂದು ಚಿತ್ರಸಂತೆ : ಬಿ.ಎಲ್.ಶಂಕರ್

1500 ಮಂದಿ ಕಲಾವಿದರ ಕಲಾಕೃತಿಗಳು ಪ್ರದರ್ಶನ
Published 3 ಜನವರಿ 2024, 15:43 IST
Last Updated 3 ಜನವರಿ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್‌ನ 21ನೇ ವರ್ಷದ ಚಿತ್ರಸಂತೆ ಇದೇ 7ರಂದು ಕುಮಾರಕೃಪಾ ರಸ್ತೆ ಮತ್ತು ಪರಿಷತ್‌ ಆವರಣದಲ್ಲಿ ನಡೆಯಲಿದೆ.

ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್‌.ಶಂಕರ್, ‘ಈ ಬಾರಿ ಉನ್ನತ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಚಿತ್ರಸಂತೆಯನ್ನು ಆಯೋಜಿಸಲಾಗುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭಾರತೀಯ ವಿಜ್ಞಾನಿಗಳಿಗೆ ಚಿತ್ರಸಂತೆಯನ್ನು ಸಮರ್ಪಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

‘ಜ.7ರಂದು ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಿತ್ರಸಂತೆ ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡುವರು’ ಎಂದು ಅವರು ವಿವರಿಸಿದರು.

‘ಚಿತ್ರಸಂತೆಯಲ್ಲಿ 22 ರಾಜ್ಯಗಳಿಂದ 1500 ಮಂದಿ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಒಟ್ಟು 2726 ಕಲಾವಿದರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಪ್ರತಿ ವರ್ಷ 1200 ಕಲಾವಿದರಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಈ ಬಾರಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾದ ಕಾರಣ, ಶಿವಾನಂದ ವೃತ್ತದ ಮೇಲ್ಸೇತುವೆ ಕೆಳ ಭಾಗದಲ್ಲಿ ಹೆಚ್ಚುವರಿಯಾಗಿ 300 ಮಳಿಗೆಗಳನ್ನು ತೆರೆಯಲಾಗುತ್ತಿದೆ‘ ಎಂದು ಮಾಹಿತಿ ನೀಡಿದರು.

ಫೀಡರ್‌ ಬಸ್‌  ಸೇವೆ : ಚಿತ್ರಸಂತೆಗೆ ಬರುವವರಿಗೆ ಮೆಜೆಸ್ಟಿಕ್‌ ಮತ್ತು ಮಂತ್ರಿ ಮಾಲ್‌ ಮೆಟ್ರೊ ನಿಲ್ದಾಣಗಳಿಂದ ಶಿವಾನಂದ ವೃತ್ತದ ಮಾರ್ಗವಾಗಿ ವಿಧಾನಸೌಧದವರೆಗೆ ಜ.7 ರಂದು ಬೆಳಿಗ್ಗೆ 8ರಿಂದ ರಾತ್ರಿ 9 ರವರೆಗೆ ಫೀಡರ್‌ ಬಸ್‌ ಸೇವೆ ಕಲ್ಪಿಸುವಂತೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.

6ರಂದು ‘ಚಿತ್ರಕಲಾ ಸಮ್ಮಾನ್‌’: ’ಜ.6ರಂದು ಬೆಳಿಗ್ಗೆ 11.30ಕ್ಕೆ ಚಿತ್ರಕಲಾ ಪರಿಷತ್ತಿನಿಂದ ನಾಲ್ವರು ಕಲಾವಿದರಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ 'ಚಿತ್ರಕಲಾ ಸಮ್ಮಾನ್‌' ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ‘ ಎಂದು ಶಂಕರ್‌ ತಿಳಿಸಿದರು.

ಸಂತೆಯಲ್ಲಿ ಸೌಲಭ್ಯಗಳು * ಕ್ರೆಸೆಂಟ್‌ ರೋಡ್‌ನಲ್ಲಿ ಗಾಲ್ಫ್‌ ಕ್ಲಬ್‌ವರೆಗೆ ರೇಸ್‌ಕೋರ್ಸ್‌ ರಸ್ತೆ ಹಾಗೂ ಬಿಡಿಎ ಆವರಣ ರೈಲ್ವೆ ಪ್ಯಾರಲಲ್‌ ರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ. * ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲಾಕೃತಿಗಳಿಗಾಗಿ ಶಿವಾನಂದ ವೃತ್ತದಿಂದ ಗುರುರಾಜ ಕಲ್ಯಾಣ ಮಂಟಪದವರೆಗಿನ ಸ್ಟೀಲ್‌ ಬ್ರಿಡ್ಜ್‌ ತಳಭಾಗದಲ್ಲಿ ಮಾರಾಟದ ಮಳಿಗೆಗೆ ವ್ಯವಸ್ಥೆ. * 20 ಆಯ್ದ ಸ್ಥಳಗಳಲ್ಲಿ ಮೊಬೈಲ್‌ ಶೌಚಾಲಯ ಅಗತ್ಯ ಸಿಸಿ ಕ್ಯಾಮೆರಾಗಳ ಅಳವಡಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT