ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಚಿತ್ರಸಂತೆ ಇಂದಿನಿಂದ

Last Updated 2 ಜನವರಿ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿರುವ ಚಿತ್ರಸಂತೆ ಭಾನುವಾರದಿಂದ ಆರಂಭವಾಗಲಿದೆ. ಪರಿಷತ್‌ನ ಈ 18ನೇ ಚಿತ್ರಸಂತೆಯು ಇದೇ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ನಡೆಯುತ್ತಿದೆ. ಚಿತ್ರ ರಸಿಕರು ಒಂದು ತಿಂಗಳು ಕಲಾಕೃತಿಗಳನ್ನು ಕಣ್ತುಂಬಿಕೊಳ್ಳಬಹುದು. ಕಲಾವಿದರನ್ನು ಸಂಪರ್ಕಿಸಿ ತಮ್ಮ ಇಷ್ಟದ ಕಲಾಕೃತಿಯನ್ನು ಖರೀದಿಸಬಹುದು.

‘ಸಾರ್ವಜನಿಕರ ಹಿತದೃಷ್ಟಿಯಿಂದ ಈ ಬಾರಿ ಆನ್‌ಲೈನ್‌ ಮೂಲಕ ಚಿತ್ರಸಂತೆ ನಡೆಸಲಾಗುತ್ತಿದೆ. ಕೊರೊನಾ ಸೇನಾನಿಗಳಿಗೆ ಈ ಬಾರಿಯ ಚಿತ್ರಸಂತೆಯನ್ನು ಅರ್ಪಿಸಲಾಗುವುದು’ ಎಂದು ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಡಾ. ಬಿ.ಎಲ್. ಶಂಕರ್‌ ಹೇಳಿದ್ದಾರೆ.

ಪರಿಷತ್ತಿನ 5 ಗ್ಯಾಲರಿಗಳನ್ನು ಬಳಸಲಾಗುತ್ತದೆ. ಜೊತೆಗೆ ಕಲಾ ವಿಶ್ವವಿದ್ಯಾಲಯದ 10 ತರಗತಿ ಕೊಠಡಿಗಳನ್ನು ಗ್ಯಾಲರಿಗಳಾಗಿ ಪರಿವರ್ತಿಸಿದ್ದು, ಅಲ್ಲಿಯೂ ಭಾರತದ ಆಯ್ದ ಮತ್ತು ಆಹ್ವಾನಿತ ಪ್ರಸಿದ್ಧ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತದೆ ಎಂದಿ ಪರಿಷತ್ತು ತಿಳಿಸಿದೆ.

ದೇಶ ಮತ್ತು ವಿದೇಶದ 18ರಿಂದ 80 ವಯೋವರ್ಗದ 1,500 ಕಲಾವಿದರು ಭಾಗವಹಿಸಲಿದ್ದಾರೆ. ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಒಂದು ಆನ್‍ಲೈನ್ ಪುಟವನ್ನು ಮೀಸಲಿರಿಸಲಾಗಿರಿಸಿದ್ದು, ಪ್ರತಿ ಕಲಾವಿದನೂ ತಮಗೆ ಮೀಸಲಿರಿಸಿದ ಪುಟದಲ್ಲಿ 10 ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಕಲಾವಿದರ ವಿವರವೂ ಅದರಲ್ಲಿ ಇರಲಿದೆ. ಅವರನ್ನು ಚಿತ್ರಪ್ರೇಮಿಗಳು ನೇರವಾಗಿ ಸಂಪರ್ಕಿಸಬಹುದು.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಜಾಲತಾಣಗಳಾದ ಫೇಸ್‍ಬುಕ್, ಇನ್‍ಸ್ಟಾಗ್ರಾಂ, ಯೂಟ್ಯೂಬ್ ಹಾಗೂ https://www karnatakachitrakalaparishath.com/chitra-santhe/ ವೆಬ್‌ಸೈಟ್‌ನಲ್ಲಿ ಕಲಾಕೃತಿಗಳನ್ನು ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT