ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೌತ್‌ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಸಂಭ್ರಮದ ರಥಯಾತ್ರೆ

Published 24 ಜೂನ್ 2023, 16:26 IST
Last Updated 24 ಜೂನ್ 2023, 16:26 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬನ್ನೇರುಘಟ್ಟ ಮುಖ್ಯರಸ್ತೆಯ ಸೌತ್‌ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಶನಿವಾರ ಜಗನ್ನಾಥ ರಥಯಾತ್ರೆಯು ಅಪಾರ ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

ಸೌತ್‌ ಸಿಟಿ ಓಡಿಯಾ ಸಮಿತಿ (ಉತ್ಕಲ) ಹಾಗೂ ಸುಗೃಹ (ಸೌತ್‌ ಸಿಟಿ ಗ್ರೂಪ್‌ ಹೌಸಿಂಗ್ ಅಪಾರ್ಟ್‌ಮೆಂಟ್‌ ಓನರ್ಸ್ ಅಸೋಸಿಯೇಷನ್‌) ಸಹಯೋಗದಲ್ಲಿ ಮೂರನೇ ವರ್ಷದ ರಥಯಾತ್ರೆ ನಡೆಯಿತು.

ಅಪಾರ್ಟ್‌ಮೆಂಟ್ ನಿವಾಸಿಗಳು ಜಗನ್ನಾಥ, ಬಾಲಭದ್ರ, ಸುಭದ್ರರನ್ನು ಭಕ್ತಿಯಿಂದ ಬರಮಾಡಿಕೊಂಡರು. ಪೂಜೆ ಹಾಗೂ ಆರತಿ ನೆರವೇರಿತು. ನೂರಾರು ಮಂದಿ ರಥ ಎಳೆದು ಭಕ್ತಿ ಸಮರ್ಪಿಸಿದರು.  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT