ಬೆಂಗಳೂರು: ರಿಚ್ಮಂಡ್ ಟೌನ್ನಲ್ಲಿರುವ ಕ್ಲಾರೆನ್ಸ್ ಹೈಸ್ಕೂಲ್ ತನ್ನ 111ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ, ಭಾರತೀಯ ಅಂಚೆ ಇಲಾಖೆ ಸಹಯೋಗದಲ್ಲಿ ‘ಸ್ಮರಣಾರ್ಥ ವಿಶೇಷ ಪೋಸ್ಟಲ್ ಕವರ್’ ಅನ್ನು ಬಿಡುಗಡೆ ಮಾಡಿದೆ.

ಸಮಾರಂಭದಲ್ಲಿ ಹಾಜರಿದ್ದ, ಶಾಲೆಯ ಹಳೆಯ ವಿದ್ಯಾರ್ಥಿ ದೊಡ್ಡ ಬಳ್ಳಾಪುರ ವಿಧಾನಸಭೆ ಕ್ಷೇತ್ರದ ಧೀರಜ್ ಮುನಿರಾಜು, ತಮ್ಮ ಶಾಲಾ ದಿನಗಳನ್ನು ಸ್ಮರಿಸಿಕೊಂಡರು. ಬೆಂಗಳೂರು ಜಿಪಿಒದ ಮುಖ್ಯ ಪೋಸ್ಟ್ ಮಾಸ್ಟರ್ ಸಿ. ಸೆಲ್ವಿ ಅವರು ಭಾಗವಹಿಸಿದ್ದರು.

ಮಾರ್ಚ್ 15ರಂದು ‘ನಮ್ಮ ಪವರ್ ರನ್’

ಬೆಂಗಳೂರು: ಸೂತ್ರ ಫಿಟ್ನೆಸ್ ವತಿಯಿಂದ ಡಾ.ಪುನೀತ್ ರಾಜ್ಕುಮಾರ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಟ ಪುನೀತ್ ರಾಜ್ಕುಮಾರ್ ಸ್ಮರಣಾರ್ಥ ‘ನಮ್ಮ ಪವರ್ ರನ್’ ಅನ್ನು ಮಾರ್ಚ್ 15ರಂದು ಆಯೋಜಿಸಲಾಗಿದೆ. ಇದು ನಾಲ್ಕನೇ ಆವೃತ್ತಿಯಾಗಿದ್ದು, 5ಕೆ, 10ಕೆ ಓಟ ಹಾಗೂ 21.1ಕೆ ಹಾಫ್ ಮ್ಯಾರಾಥಾನ್ ವರ್ಗಗಳಿವೆ. ಹೊಸಕೆರೆಹಳ್ಳಿ ಬಳಿಯ ನೈಸ್ ಜಂಕ್ಷನ್ನಿಂದ ಓಟ ಆರಂಭವಾಗಲಿದೆ. ನೋಂದಣಿ,

ವಿವರಗಳಿಗೆ: https://nammapowerrun.com/ ಸಂಪರ್ಕಿಸಬಹುದು.

ಹೂವಿನ ಕರಗ ಉತ್ಸವ

ಬೆಂಗಳೂರು: ರಾಜಾಜಿನಗರದ ನಾಗಪ್ಪ ಬ್ಲಾಕ್ನಲ್ಲಿರುವ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ಇದೇ 15ರಂದು ಸಂಜೆ ಹೂವಿನ ಕರಗ ಉತ್ಸವ ನಡೆಯಲಿದೆ. ಇದೇ 13ರಿಂದ ಉತ್ಸವ ಆರಂಭವಾಗಲಿದೆ. ಅದೇ ದಿನ ಗಂಗೆ ಪೂಜೆ, 15ರಂದು ಹೂವಿನ ಕರಗದ ಜತೆಗೆ ಶಕ್ತಿ ಕರಗ, ಅಗ್ನಿ ತುಳಿಯುವ ಕಾರ್ಯಕ್ರಮವಿದೆ. 16ರಂದು ಕಾಳಿವೇಷಧಾರಿಯಿಂದ ರುದ್ರತಾಂಡವ ಕಾರ್ಯಕ್ರಮ ನಡೆಯುತ್ತದೆ. 17ರಂದು ಲಲಿತಾ ಸಹಸ್ರನಾಮ, ಲಕ್ಷಾರ್ಚನೆ, ವಸಂತೋತ್ಸವ ಮತ್ತು ಸುಮಂಗಲಿ ಪೂಜೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.