ಪೀಣ್ಯ ದಾಸರಹಳ್ಳಿ: ಹೆಸರುಘಟ್ಟ ಮುಖ್ಯರಸ್ತೆಯಲ್ಲಿರುವ ಆತ್ಮೀಯ ಗೆಳೆಯರ ಬಳಗ ಬಡಾವಣೆಯಲ್ಲಿ ಬಿಬಿಎಂಪಿ ಸಿಬ್ಬಂದಿ, ಪೊಲೀಸ್ ಬಂದೋಬಸ್ತ್ನಲ್ಲಿ ರಸ್ತೆ ಬದಿಯ ಅಂಗಡಿ ಹಾಗೂ ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಿದರು.

ದಾಸರಹಳ್ಳಿ ವಲಯ ಆಯುಕ್ತ ನವೀನ್ ಕುಮಾರ್ ಅವರ ಆದೇಶದ ಮೇರೆಗೆ ಸಹಾಯಕ ಎಂಜಿನಿಯರ್ ಮಂಜೇಗೌಡ ನೇತೃತ್ವದಲ್ಲಿ ಬಿಬಿಎಂಪಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ತೆರವುಗೊಳಿಸಿದ ರಸ್ತೆ ಬದಿಯ ಅಂಗಡಿಗಳು, ನಾಮಫಲಕ ಇತ್ಯಾದಿಗಳನ್ನು ಬಿಬಿಎಂಪಿ ಸಿಬ್ಬಂದಿ ಐದಾರು ಟ್ರಾಕ್ಟರ್ಗಳಲ್ಲಿ ತುಂಬಿಕೊಂಡರು. ಪಾದಚಾರಿ ಮಾರ್ಗದಲ್ಲಿದ್ದ ಗೋಡೆಗಳನ್ನು ತೆರವುಗೊಳಿಸಿದರು.

'ಮೊದಲೇ ಹೇಳಿದ್ದರೆ ನಾವೇ ತೆಗೆಯುತ್ತಿದ್ದೆವು. ಸಾಲ ಮಾಡಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡಿದ್ದೇವೆ. ನಮ್ಮ ಹೊಟ್ಟೆ ಮೇಲೆ ಹೊಡೆಯುವ ಕೆಲಸವನ್ನು ಬಿಬಿಎಂಪಿ ಮಾಡಿದೆ’ ಎಂದು ಅಂಗಡಿಯವರು ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಬಾಣಾವರ ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಕೇಶವಮೂರ್ತಿ ಎನ್.ಎನ್, ಪಿಎಸ್ಐ ಅಶ್ವತ್ಥಯ್ಯ, ಎಎಸ್ಐ ವೆಂಕಟೇಶ ಮೂರ್ತಿ, ಎಚ್. ಸಿ ಮಂಜುನಾಥ್, ಸಂಜೀವ್, ಸೋಲದೇವನಹಳ್ಳಿ ಪೊಲೀಸ್ ಠಾಣೆಯ ಧನಂಜಯ್, ವಿಜಯ್ ಕುಮಾರ್, ಮಾಳಪ್ಪ ಕಾರ್ಯಾಚರಣೆ ವೇಳೆ ಬಂದೋಬಸ್ತ್ನಲ್ಲಿದ್ದರು.

ಬಿಬಿಎಂಪಿ ಅಧಿಕಾರಿಗಳಾದ ಮಂಜೇಗೌಡ, ತನಯ್ ಕುಮಾರ್, ಜೆ.ಎಚ್.ಐ ಸುರೇಶ್, ರಘುನಾಥ್ ಕಾರ್ಯಾಚರಣೆಯ ನೇತೃತ್ವವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.