ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಟೆ ವ್ಯಾಪಾರಿಯ ₹ 8 ಲಕ್ಷ ಕಳವು: ಪ್ರಕರಣ ದಾಖಲು

Last Updated 20 ಜೂನ್ 2022, 20:07 IST
ಅಕ್ಷರ ಗಾತ್ರ

ಬೆಂಗಳೂರು: ಕಡಿಮೆ ಬೆಲೆಗೆ ಬಟ್ಟೆ ಕೊಡಿಸುವ ಆಮಿಷವೊಡ್ಡಿ ತಮಿಳುನಾಡಿನ ವ್ಯಾಪಾರಿಯನ್ನು ನಗರಕ್ಕೆ ಕರೆಸಿ ₹ 8 ಲಕ್ಷ ಕಳ್ಳತನ ಮಾಡಿರುವ ಬಗ್ಗೆ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ತಮಿಳುನಾಡಿನ ನಮಕ್ಕಲ್ ಜಿಲ್ಲೆಯ ಬಟ್ಟೆ ವ್ಯಾಪಾರಿ ಕೆ. ರಾಮಸ್ವಾಮಿ ಅವರುಕಳ್ಳತನದ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ಉಮರ್ ಶಫಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ಎಂದು ಪೊಲೀಸರು ಹೇಳಿದರು.

‘ಸ್ನೇಹಿತರ ಪಾಲುದಾರಿಕೆಯಲ್ಲಿರಾಮಸ್ವಾಮಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ. ಅವರಿಗೆ ಪರಿಚಯವಾಗಿದ್ದ ಉಮರ್, ‘ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಟ್ಟೆ ಸಿಗುತ್ತವೆ. ಬಂದರೆ, ಕೊಡಿಸುತ್ತೇನೆ’ ಎಂದಿದ್ದ. ಅದನ್ನು ನಂಬಿದ್ದ ದೂರುದಾರ ಹಾಗೂ ಸ್ನೇಹಿತ, ₹ 9 ಲಕ್ಷ ನಗದು ಸಮೇತ ಮೇ 24ರಂದು ಬೆಂಗಳೂರಿಗೆ ಬಂದಿದ್ದರು.’

ರಾಮಸ್ವಾಮಿ ಅವರನ್ನು ಮೆಜೆಸ್ಟಿಕ್‌ನಸಂಗಮ್ ವಸತಿ ಗೃಹದಲ್ಲಿ ವ್ಯವಸ್ಥೆ ಮಾಡಿದ್ದರು. ಬಳಿಕ, ₹ 8 ಲಕ್ಷವಿದ್ದ ಆತನ ಬ್ಯಾಗ್‌ ಸಮೇತ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT