10 ಮಂದಿಗೆ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರಿಗೆ ‘ರಮಣಶ್ರೀ ಶರಣ ಜೀವಮಾನ ಸಾಧನೆ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇದು ₹ 50 ಸಾವಿರ ನಗದು ಒಳಗೊಂಡಿದೆ. ವೀಣಾ ಬನ್ನಂಜೆ ಬಸವರಾಜ ಸಾದರ ಎನ್. ತಿಮ್ಮಪ್ಪ ಹಾಗೂ ಓಂಕಾರ್‌ನಾಥ್ ಹವಾಲ್ದಾರ್ ಅವರಿಗೆ ‘ರಮಣಶ್ರೀ ಶರಣ ಹಿರಿಯ ಶ್ರೇಣಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ತಲಾ ₹ 40 ಸಾವಿರ ನಗದು ಒಳಗೊಂಡಿದೆ. ಎ.ಜೆ. ಶಿವಕುಮಾರ ದೇವರಾಜ ಪಿ. ಚಿಕ್ಕಹಳ್ಳಿ ಕುಮಾರ ಕಣವಿ ಹಾಗೂ ಜೆ.ಎಸ್. ಖಂಡೇರಾವ ಅವರಿಗೆ ‘ರಮಣಶ್ರೀ ಶರಣ ಉತ್ತೇಜನ ಶ್ರೇಣಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಇದು ತಲಾ ₹ 20 ಸಾವಿರ ನಗದು ಒಳಗೊಂಡಿದೆ. ಸ್ನೇಹಾ ಕಪ್ಪಣ್ಣ ಅವರಿಗೆ ‘ರಮಣಶ್ರೀ ಶರಣ ವಿಶೇಷ ಪುರಸ್ಕಾರ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ಪ್ರಶಸ್ತಿಯ ನಗದು ಹಾಗೂ ₹ 501 ಮೊತ್ತವನ್ನು ಪ್ರತಿಷ್ಠಾನಕ್ಕೆ ನೀಡಿದರು. ‘ಮುಂದಿನ ವರ್ಷದಿಂದ ವಚನ ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳನ್ನೂ ಗುರುತಿಸಿ ಗೌರವಿಸುವ ಕಾರ್ಯಕ್ಕೆ ಈ ಹಣವನ್ನು ಬಳಸಿಕೊಳ್ಳುವಂತೆ’ ಮನವಿ ಮಾಡಿಕೊಂಡರು.