ಬೆಂಗಳೂರು: ನಾಣ್ಯಗಳು ಕೇವಲ ಆರ್ಥಿಕತೆಯ ಸಂಕೇತವಾಗಿರುವುದಿಲ್ಲ. ಅವು ಪ್ರಭುತ್ವದ ಸಂಕೇತವೂ ಆಗಿವೆ. ಆರ್ಥಿಕ ವ್ಯವಸ್ಥೆ, ಧಾರ್ಮಿಕ ನಿಲುವು, ಪ್ರಭುತ್ವದ ಶಕ್ತಿ ಎಲ್ಲವನ್ನೂ ನಾಣ್ಯಗಳು ಪ್ರತಿಬಿಂಬಿಸುತ್ತವೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಜಯಕರ್ ಶೆಟ್ಟಿ ತಿಳಿಸಿದರು.

ನಗರದಲ್ಲಿ ದಿ ಮಿಥಿಕ್ ಸೊಸೈಟಿ ಮತ್ತು ಚೆನೈಯ ಸೌತ್ ಇಂಡಿಯನ್ ನ್ಯೂಮಿಸ್ಮ್ಯಾಟಿಕ್ಸ್ ಸೊಸೈಟಿ ಜಂಟಿಯಾಗಿ ಶನಿವಾರ ಆಯೋಜಿಸಿದ್ದ 33ನೇ ಸೌತ್ ಇಂಡಿಯನ್ ನ್ಯೂಮಿಸ್ಮ್ಯಾಟಿಕ್ಸ್ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಣ್ಯಶಾಸ್ತ್ರದ ಅಧ್ಯಯನ ಇತ್ತೀಚಿನ ವರ್ಷಗಳಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ನಡೆಯುತ್ತಿದೆ. ನಾಣ್ಯಗಳು ಆ ಕಾಲದ ಸಾಂಪ್ರದಾಯಿಕ ಪರಂಪರೆ, ಸಾಮಾಜಿಕ ವ್ಯವಸ್ಥೆ, ತಂತ್ರಜ್ಞಾನ ಮತ್ತು ಆಡಳಿತ ವ್ಯವಸ್ಥೆ ಮುಂತಾದ ಅನೇಕ ವಿಷಯಗಳ ಕುರಿತು ಬೆಳಕನ್ನು ಚೆಲ್ಲುತ್ತವೆ ಎಂದು ವಿವರಿಸಿದರು.

ಸೌತ್ ಇಂಡಿಯನ್ ನ್ಯೂಮಿಸ್ಮ್ಯಾಟಿಕ್ಸ್ ಸೊಸೈಟಿ ಅಧ್ಯಕ್ಷ ಡಾ. ಡಿ. ರಾಜಾರೆಡ್ಡಿ ಮಾತನಾಡಿ, ‘ಪ್ರಪಂಚಕ್ಕೆ ನಾಣ್ಯಶಾಸ್ತ್ರ ಕೊಡುಗೆ ನೀಡಿದ ಮೊದಲ ಮೂರು ರಾಷ್ಟ್ರಗಳಲ್ಲಿ ಪ್ರಾಚೀನ ಭಾರತ ಒಂದಾಗಿದೆ. ನಾಣ್ಯಗಳ ವೈಜ್ಞಾನಿಕ ಅಧ್ಯಯನದಿಂದ ನಮ್ಮ ಪ್ರಾಚೀನ ಪರಂಪರೆಯಿಂದ ಹಿಡಿದು ಇಂದಿನವರೆಗಿನ ಇತಿಹಾಸದ ಅಧ್ಯಯನವನ್ನು ವೈಜ್ಞಾನಿಕ ರೀತಿಯಲ್ಲಿ ಮಾಡುವುದು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ದಿ. ಮಿಥಿಕ್ ಸೊಸೈಟಿ ಅಧ್ಯಕ್ಷ ವಿ. ನಾಗರಾಜ್ ಮಾತನಾಡಿ, ‘ಐತಿಹಾಸಿಕ ಅಧ್ಯಯನವನ್ನು ವೈಜ್ಞಾನಿಕ ರೀತಿಯಲ್ಲಿ ಕೈಗೊಳ್ಳುವುದು ಅವಶ್ಯಕ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತಿಹಾಸದ ನಿಜಸ್ವರೂಪವನ್ನು ತಿಳಿಸುವುದು ಸಂಶೋಧಕರ ಜವಾಬ್ದಾರಿ’ ಎಂದು ಅಭಿಪ್ರಾಯಪಟ್ಟರು.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಶಾಸನವಿಜ್ಞಾನ ವಿಭಾಗದ ನಿರ್ದೇಶಕ ಟಿ.ಎಸ್. ರವಿಶಂಕರ್, ರಾಜ್ಯ ಪುರಾತತ್ವ, ವಸ್ತುಸಂಗ್ರಹಾಲಯ ಮತ್ತು ಸಾಂಸ್ಕೃತಿಕ ಇಲಾಖೆಯ ಮಾಜಿ ನಿರ್ದೇಶಕ ಆರ್. ಗೋಪಾಲ್, ಸೌತ್ ಇಂಡಿಯನ್ ನ್ಯೂಮಿಸ್ಮ್ಯಾಟಿಕ್ಸ್ ಸೊಸೈಟಿ ಕಾರ್ಯದರ್ಶಿ ಟಿ. ಸತ್ಯಮೂರ್ತಿ, ಸಂಸ್ಥೆಯ ಸಂಶೋಧನ ಪತ್ರಿಕೆಯ ಸಂಪಾದಕ ಪಿ.ವಿ. ರಾಧಾಕೃಷ್ಣನ್, ಖಜಾಂಚಿ ಕಲಾವತಿ, ದಿ ಮಿಥಿಕ್ ಸೊಸೈಟಿಯ ಸಂಶೋಧನಾ ಕೇಂದ್ರದ ನಿರ್ದೇಶಕ ಶ್ರೀನಿವಾಸ ವಿ. ಪಾಡಿಗಾರ್, ಸಂಯೋಜಕ ಪಿ. ಜಯಸಿಂಹ ಉಪಸ್ಥಿತರಿದ್ದರು.

ಸೌತ್ ಇಂಡಿಯನ್ ನ್ಯೂಮಿಸ್ ಮ್ಯಾಟಿಕ್ಸ್ ಸೊಸೈಟಿಯ ಸಂಶೋಧನಾ ಪತ್ರಿಕೆಗಳನ್ನೊಳಗೊಂಡ 32ನೇ ಸಂಪುಟವನ್ನು ಬಿಡುಗಡೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.