ಬೆಂಗಳೂರು: ಕೆಪಿಟಿಸಿಎಲ್ ವತಿಯಿಂದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣವಾಗುತ್ತಿರುವ ಥೀಮ್ ಪಾರ್ಕ್ ಕಾಮಗಾರಿಯನ್ನು ಏಪ್ರಿಲ್ ಒಳಗಾಗಿ ಪೂರ್ಣಗೊಳಿಸಿ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಸರ್ವಜ್ಞನಗರ ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಎಚ್ಬಿಆರ್ ಲೇಔಟ್ನ 5ನೇ ಬ್ಲಾಕ್ನ ಕೆಪಿಟಿಸಿಎಲ್ ಸ್ಟೇಷನ್ ಬಳಿ ನಿರ್ಮಾಣಗೊಳ್ಳುತ್ತಿರುವ ಥೀಮ್ ಪಾರ್ಕ್ನ ಕಾಮಗಾರಿ ಗುಣಮಟ್ಟದ ಜತೆಗೆ ತ್ವರಿತವಾಗಿ ಕೆಲಸ ಮುಗಿಸಬೇಕು. ಸಮಾಜಕ್ಕೆ ಹಸಿರಿನ ಮಹತ್ವ ತಿಳಿಸುವ ಉದ್ದೇಶದಿಂದ ನಿರ್ಮಾಣಗೊಳ್ಳುತ್ತಿರುವ ಈ ಥೀಮ್ ಪಾರ್ಕ್ ಕ್ಷೇತ್ರಕ್ಕೆ ಮಾತ್ರವಲ್ಲ, ರಾಜ್ಯದಲ್ಲೂ ಮಾದರಿಯಾಗಿರಬೇಕು ಎಂದರು.

ಥೀಮ್ ಪಾರ್ಕ್ನಲ್ಲಿ ತರಬೇತಿ ಕೇಂದ್ರ, ಗ್ರಾಮೀಣ ಆಟಗಳು, ಬಯಲು ರಂಗಮಂದಿರ, ಪಾದಚಾರಿ ಪಥ, ಓಪನ್ ಜಿಮ್, ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ವ್ಯವಸ್ಥೆ, ಮ್ಯಾಪಿಂಗ್ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ರೂಪಿಸಬೇಕು ಎಂದು ನಿರ್ದೇಶನ ನೀಡಿದರು.

ಎಚ್.ಬಿ.ಆರ್. ಲೇಔಟ್ 1ನೇ ಬ್ಲಾಕ್, ಸುಬ್ಬಯ್ಯ ಲೇಔಟ್ 1ನೇ ಮುಖ್ಯರಸ್ತೆಯ ಸಮೀಪ ಅಳವಡಿಸಲಾಗುತ್ತಿರುವ 600 ಎಂಎಂ ಎಂ.ಎಸ್ ನೀರಿನ ಪೈಪ್ಲೈನ್ ಯೋಜನೆಯನ್ನು ಪರಿಶೀಲಿಸಿದರು. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಎಚ್.ಬಿ.ಆರ್. ವಾರ್ಡ್ ಸಂಖ್ಯೆ 78ರಲ್ಲಿರುವ ಕಾಡುಗೊಂಡನಹಳ್ಳಿ ಸರ್ಕಾರಿ ಕನ್ನಡ ಮಾದರಿ ಪಾಠಶಾಲೆಯಲ್ಲಿ ನಿರ್ಮಿಸಿರುವ ಕೊಠಡಿ ಹಾಗೂ ಊಟದ ಕೊಠಡಿಯನ್ನು ಉದ್ಘಾಟಿಸಿದರು.

ವೀರಣ್ಣಪಾಳ್ಯ ಮುಖ್ಯರಸ್ತೆ ಮತ್ತು 4ನೇ ಅಡ್ಡರಸ್ತೆ-ಇಂದಿರಾ ಕ್ಯಾಂಟೀನ್ ರಸ್ತೆ ಮತ್ತು ನಾಗವಾರ ಮುಖ್ಯರಸ್ತೆಯಿಂದ ರೈಲ್ವೆ ಗೇಟ್ವರೆಗಿನ ವಿನಾಯಕ ದೇವಸ್ಥಾನದ ರಸ್ತೆಗಳ ಸಮಗ್ರ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅನುದಾನದಡಿಯಲ್ಲಿ ಮಂಜೂರು ಮಾಡಲಾದ ರಸ್ತೆ ಕಾಮಗಾರಿಗಳಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.

ಎಚ್ಆರ್ಬಿಆರ್ ಲೇಔಟ್ 1 ನೇ ಬ್ಲಾಕ್ 8ನೇ ಮುಖ್ಯರಸ್ತೆಯ ಸಮೀಪದಲ್ಲಿ ಒಳಚರಂಡಿ ವ್ಯವಸ್ಥೆಯ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿದರು. ಬಾಣಸವಾಡಿ ಮುಖ್ಯ ರಸ್ತೆಯ ಸಮೀಪ ನೂತನವಾಗಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು. ಒಎಂಬಿಆರ್ ಲೇಔಟ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಕ್ರೀಡಾ ಸಂಕೀರ್ಣ ಕಾಮಗಾರಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.