ಬೆಂಗಳೂರು: ಬೆಂಗಳೂರು ವ್ಯಾಪ್ತಿಯ 28 ಕ್ಷೇತ್ರಗಳಲ್ಲಿ, ಅತಿಹೆಚ್ಚು ಕ್ಷೇತ್ರಗಳನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ನಾಯಕರು, ನಗರದ ಏಟ್ರಿಯಾ ಹೋಟೆಲ್‌ನಲ್ಲಿ ಸೋಮವಾರ ಸಭೆ ಸೇರಿ ಚರ್ಚೆ ನಡೆಸಿದರು.

ಬೆಂಗಳೂರಿನ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದ ಡಿ.ಕೆ. ಸುರೇಶ್, ರಾಜ್ಯಸಭೆ ಸದಸ್ಯರು, ಬೆಂಗಳೂರು ವಿಭಾಗದ ಉಸ್ತುವಾರಿ ಹೊಂದಿರುವ ಎಐಸಿಸಿ ಕಾರ್ಯ ದರ್ಶಿ ಅಭಿಷೇಕ್ ದತ್ತ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಭೆಯಲ್ಲಿದ್ದರು. ಹಾಲಿ ಎಲ್ಲ ಶಾಸಕರಿಗೆ ಟಿಕೆಟ್ ನೀಡುವ ಜೊತೆಗೆ, ಇತರ ಕ್ಷೇತ್ರಗಳಲ್ಲಿ ಸಮರ್ಥರನ್ನು ಕಣಕ್ಕಿಳಿಸಲು ಸಭೆಯಲ್ಲಿ ಚರ್ಚೆ ನಡೆದಿದೆ.

‘ಹೆಬ್ಬಾಳ (ಬೈರತಿ ಸುರೇಶ್), ಬಿಟಿಎಂ ಲೇಔಟ್ (ರಾಮಲಿಂಗಾರೆಡ್ಡಿ), ಜಯ ನಗರ (ಸೌಮ್ಯಾರೆಡ್ಡಿ,) ಶಿವಾಜಿ ನಗರ (ರಿಜ್ವಾನ್ ಅರ್ಷದ್), ಪುಲಕೇಶಿನಗರ (ಅಖಂಡಶ್ರೀನಿವಾಸಮೂರ್ತಿ), ಸರ್ವಜ್ಞನಗರ (ಕೆ.ಜೆ. ಜಾರ್ಜ್), ಶಾಂತಿನಗರ (ಎನ್.ಎ. ಹ್ಯಾರೀಸ್), ಚಾಮರಾಜ ಪೇಟೆ (ಜಮೀರ್ ಅಹ್ಮದ್), ಬ್ಯಾಟರಾಯನಪುರ (ಕೃಷ್ಣ ಬೈರೇಗೌಡ), ವಿಜಯ ನಗರ (ಎಂ. ಕೃಷ್ಣಪ್ಪ), ಆನೇಕಲ್ (ಬಿ. ಶಿವಣ್ಣ) ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದು, ಅವರಿಗೇ ಟಿಕೆಟ್ ಖಚಿತ ವಾಗಿದೆ. ಗೋವಿಂದರಾಜ ನಗರ (ಪ್ರಿಯಾಕೃಷ್ಣ), ಆರ್.ಆರ್. ನಗರ (ಕುಸುಮಾ ಎಚ್.) ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಸೋಲು ಕಂಡವರಿಗೇ ಟಿಕೆಟ್ ಬಹುತೇಕ ಖಚಿತವಾಗಿದೆ. ಬಸವನಗುಡಿಯಿಂದ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಕಣಕ್ಕಿಳಿಯುವ ಸಾಧ್ಯತೆಯಿದೆ’ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

‘ಪದ್ಮನಾಭನಗರ ಕ್ಷೇತ್ರಕ್ಕೆ ರಘುನಾಥ ನಾಯ್ಡು, ಗುರುವಪ್ಪ ನಾಯ್ಡು, ಬೊಮ್ಮನಹಳ್ಳಿಗೆ ಉಮಾ ಪತಿ ಶ್ರೀನಿವಾಸಗೌಡ ಮತ್ತು ಕವಿತಾ
ರೆಡ್ಡಿ, ದಾಸರಹಳ್ಳಿಗೆ ಧನಂಜಯ, ಎಚ್.ಎಂ. ರೇವಣ್ಣ, ನಾಗಲಕ್ಷ್ಮಿ ಚೌಧುರಿ, ಮಲ್ಲೇಶ್ವರಕ್ಕೆ ರಶ್ಮಿ ರವಿಕಿರಣ್, ಅನೂಪ್ ಅಯ್ಯಂಗಾರ್, ರಾಜಾಜಿನಗರಕ್ಕೆ ರಘುವೀರ್ ಎಸ್. ಗೌಡ, ಜಿ. ಪದ್ಮಾವತಿ, ಬಿ.ಎಸ್. ಪುಟ್ಟರಾಜು, ಮನೋಹರ್, ಕೆ.ಆರ್.ಪುರಕ್ಕೆ
ಎಂ.ನಾರಾಯಣಸ್ವಾಮಿ ಮತ್ತು ಡಿ.ಕೆ. ಮೋಹನ್, ಸಿ.ವಿ. ರಾಮನ್ ನಗರಕ್ಕೆ ಆನಂದ್‌ಕುಮಾರ್, ಸಂಪತ್‌ರಾಜ್, ವಿ. ಶಂಕರ್, ಮಹದೇವಪುರಕ್ಕೆ ಎಚ್. ನಾಗೇಶ್, ಚಿಕ್ಕಪೇಟೆಗೆ ಆರ್.ವಿ. ದೇವರಾಜ್, ಗಂಗಾಂಬಿಕೆ ಹಾಗೂ ಬೆಂಗಳೂರು ದಕ್ಷಿಣಕ್ಕೆ ಆರ್.ಕೆ. ರಮೇಶ್ ಅವರ ಹೆಸರು ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿದೆ.
ಯಲಹಂಕ, ಯಶವಂತಪುರ ಮತ್ತು ಮಹಾಲಕ್ಷ್ಮೀ ಲೇಔಟ್ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಚರ್ಚೆಯಲ್ಲಿದೆ’ ಎಂದೂ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.