ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾಲುವೆಗೆ ತಡೆಗೋಡೆ ನಿರ್ಮಾಣ: ಶಾಸಕ ಮುನಿರಾಜು

Published 20 ಜುಲೈ 2023, 7:13 IST
Last Updated 20 ಜುಲೈ 2023, 7:13 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ‘ಮಳೆಗಾಲದಲ್ಲಿ ಜಲಾವೃತವಾಗದಂತೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗದಂತೆ ಮಾಡಲು ರಾಜ ಕಾಲುವೆಯ ಎರಡೂ ಕಡೆ ತಡೆಗೋಡೆ ನಿರ್ಮಾಣ ಮಾಡಲಾಗುವುದು’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.

ಮೇದರಹಳ್ಳಿಯ ಪಶ್ಚಿಮ ಕೌಂಟಿ ಬಳಿಯ ಸುಮಾರು 450 ಮೀಟರ್‌ ಉದ್ದದ ರಾಜ ಕಾಲುವೆಗೆ ತಡೆಗೋಡೆ, ಬಾಗಲಗುಂಟೆಯ ಮಾರಣ್ಣ ಬಡಾವಣೆಯಲ್ಲಿ ಸುಮಾರು 60 ಮೀಟರ್ ಉದ್ದದ ರಾಜಕಾಲುವೆಯ ತಡೆಗೋಡೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

‘ರಾಜ ಕಾಲುವೆಯಲ್ಲಿ ಗಿಡಗಂಟಿ ಬೆಳೆದು ಸೊಳ್ಳೆಯ ಕಾಟ ಹೆಚ್ದಾಗಿದೆ. ಇದರಿಂದ ರೋಗ ಹರಡಲಿದೆ ಎಂದು ಸ್ಥಳೀಯರು ಭೀತಿ ವ್ಯಕ್ತಪಡಿಸಿದ್ದರಿಂದ ರಾಜ ಕಾಲುವೆಗಳ ರಕ್ಷಣೆ ಮತ್ತು ಅದರ ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದೇವೆ’ ಎಂದು ಹೇಳಿದರು.

ಕೆಲವೊಂದು ರಾಜ ಕಾಲುವೆಗಳ ಒತ್ತುವರಿಯ ಬಗ್ಗೆ ಸರ್ವೆ ಮಾಡಿಸಲಾಗುವುದು. ರಾಜ ಕಾಲುವೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಿರಂಜನ್ ತಿಳಿಸಿದರು.

ದಾಸರಹಳ್ಳಿ ಮಂಡಲ ಬಿಜೆಪಿ ಅಧ್ಯಕ್ಷ ಸೋಮಶೇಖರ್, ಬಿಜೆಪಿ ಮುಖಂಡರಾದ ಭರತ್ ಸೌಂದರ್ಯ, ಗುರುಪ್ರಸಾದ್, ಕೃಷ್ಣಮೂರ್ತಿ, ಬಿ.ಎಂ. ನಾರಾಯಣ್, ರಘು ಸೂರ್ಯ, ವಿನೋದ್ ಗೌಡ, ನಾಣಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT