ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾವಿದರ ಪಾಕ ‘ಕಲೆ’

ನಂದಿನಿ ಲೇಔಟ್‌ನಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಭ
Last Updated 17 ಜೂನ್ 2020, 23:15 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹಬ್ಬುವ ಭೀತಿ ಹಿನ್ನೆಲೆಯಲ್ಲಿ ಯಾವುದೇ ಕಲಾ ಚಟುವಟಿಕೆಗಳು ನಡೆಯುತ್ತಿಲ್ಲ. ಇದರಿಂದಾಗಿ ಕಲಾವಿದರ ಬದುಕು ಮೂರಾಬಟ್ಟೆಯಾಗಿದೆ. ಇಂತಹ ಸಂದರ್ಭದಲ್ಲಿ ಐವರು ಕಲಾವಿದರ ತಂಡವೊಂದು ಜೀವನೋಪಾಯಕ್ಕೆ ಪರ್ಯಾಯ ಅವಕಾಶ ಕಂಡುಕೊಂಡು, ಹಸಿದವರಿಗೆ ರುಚಿ ರುಚಿಯಾದ ತಿನಿಸುಗಳನ್ನು ಉಣಬಡಿಸುತ್ತಿದೆ.

ನೂರಾರು ಕಲಾವಿದರು ದಾರಿ ತೋಚದೆ ಕಂಗಾಲಾಗಿರುವ ಈ ಸಂದರ್ಭದಲ್ಲಿಕಲಾವಿದರಾದ ಜಿ. ಚನ್ನಕೇಶವ, ಸಿದ್ದಾರ್ಥ್ ಮಾಧ್ಯಮಿಕ, ಅನಿಲ್ ಕುಮಾರ್, ಕೆ.ಪಿ. ಲಕ್ಷಣ ಹಾಗೂ ಚಂದ್ರು ನೀನಾಸಂ ಸೇರಿಕೊಂಡು ನಗರದ ನಂದಿನಿ ಲೇಔಟ್‌ ಉದ್ಯಾನದ ಬಳಿ ‘ಹೋ!! ಟೆಲ್ ಆರ್ಟ್‌ ಟೇಸ್ಟ್‌’ ಮೊಬೈಲ್ ಕ್ಯಾಂಟೀನ್ ಆರಂಭಿಸಿದ್ದಾರೆ. ಮನೆಯಲ್ಲಿಯೇ ಊಟ–ತಿಂಡಿಗಳನ್ನು ತಯಾರಿಸಿ ಜೀವನೋಪಾಯ ಕಂಡು
ಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸುವ ಹಂಬಲ ಇರುವವರಿಗೆ ಮಾದರಿಯಾಗಿದ್ದಾರೆ.

ನಾಟಕ, ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರು, ಕೊರೊನಾ ತಂದ ಬದಲಾವಣೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸಿ
ದ್ದಾರೆ. ಇವರು ಆರಂಭಿಸಿರುವ ಕ್ಯಾಂಟೀನ್‌ಗೆ ಸ್ಥಳೀಯರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.

ಮನೆಯ ಊಟ: ಬೆಳಗ್ಗಿನ ಉಪಾಹಾರಕ್ಕೆಚಿತ್ರಾನ್ನ, ಟೊಮೆಟೊ ಬಾತ್, ಇಡ್ಲಿ–ವಡೆ ಸೇರಿ ವಿವಿಧ ತಿನಿಸುಗಳನ್ನು ಕಲಾವಿದರು ಮನೆಯಿಂದಲೇ ಸಿದ್ಧಪಡಿಸಿ ತರುತ್ತಿದ್ದಾರೆ. ದೋಸೆ ಸೇರಿದಂತೆ ಕೆಲ ತಿನಿಸುಗಳನ್ನು ಸ್ಥಳದಲ್ಲಿಯೇ ತಯಾರಿಸುತ್ತಾರೆ. ಮಧ್ಯಾಹ್ನದ ಊಟಕ್ಕೆ ಚಪಾತಿ ಸಹಿತ ಅನ್ನ–ಸಾಂಬಾರ್ ನೀಡುತ್ತಾರೆ. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ ಈ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತದೆ.

‘ಇದು ಕೂಡ ಬೀದಿ ನಾಟಕ. ಅಡುಗೆ ಮಾಡುವುದೂ ಒಂದು ಕಲೆ. ಚಿತ್ರಾನ್ನ ಸೇರಿದಂತೆ ಯಾವುದೇ ತಿನಿಸು ಪ್ರತಿ
ನಿತ್ಯ ಭಿನ್ನವಾದ ರುಚಿ ಇರುತ್ತದೆ. ಕಲೆ ಕೂಡ ಅದೇ ರೀತಿ. ಈ ಸಂದರ್ಭದಲ್ಲಿ ಮನೆಯಲ್ಲಿಯೇ ಕುಳಿತುಕೊಳ್ಳುವ ಬದಲು
ಏನನ್ನಾದರೂ ಮಾಡಬೇಕೆಂದು ಯೋಚಿಸಿದೆವು. ಆಗ ಜನರ ಹಸಿವು ನೀಗಿಸುವ ಈ ದಾರಿ ಹೊಳೆಯಿತು’ ಎಂದು ಜಿ.ಚನ್ನಕೇಶವ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಕಲೆ ಪ್ರೇಕ್ಷಕನಿಗೆ ತೃಪ್ತಿ ನೀಡುವಂತೆ, ನಾವು ತಯಾರಿಸುವ ತಿನಿಸುಗಳನ್ನು ಸವಿದಾಗಲೂ ಗ್ರಾಹಕರಿಗೆ ಅಷ್ಟೇ ಸಂತೃಪ್ತಿ ಸಿಗಬೇಕು. ಹಾಗಾಗಿ ಈ ವೃತ್ತಿಯನ್ನೂ ಕಲೆಯಷ್ಟೇ ಪ್ರೀತಿಸುತ್ತಿದ್ದೇವೆ’ ಎಂದರು.

ಮೊಬೈಲ್ ಕ್ಯಾಂಟೀನ್ ಇರುವ ಸ್ಥಳ: ನಂದಿನಿ ಲೇಔಟ್ ಉದ್ಯಾನದ ಪಕ್ಕ, ಬಸ್ ನಿಲ್ದಾಣದ ಸಮೀಪ, ಪಂಚದೀಪ ಕಾಲೊನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT