ಬೆಂಗಳೂರು:ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯು ಕೊರೊನಾದಿಂದ ಬಳಲುತ್ತಿದ್ದ ವ್ಯಕ್ತಿಗೆ 22 ದಿನಕ್ಕೆ ₹13 ಲಕ್ಷ ಬಿಲ್ ಮಾಡಿದೆ ಎಂದು ರೋಗಿಯ ಸಂಬಂಧಿಕರು ದೂರಿದ್ದಾರೆ.

70 ವರ್ಷದ ವೃದ್ಧರೊಬ್ಬರು ವಿಪರೀತ ಕೆಮ್ಮಿನಿಂದ ಬಳಲುತ್ತಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ, ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಅವರು ಸಾವಿಗೀಡಾಗಿದ್ದಾರೆ.‘22 ದಿನಗಳವರೆಗೆ ಐಸಿಯುನಲ್ಲಿ ಚಿಕಿತ್ಸೆ ನೀಡಿದರು. ಈಗ ₹13.54 ಲಕ್ಷ ಬಿಲ್ ಕೊಟ್ಟಿದ್ದಾರೆ. ಈವರೆಗೆ ₹2.50 ಲಕ್ಷ ಕಟ್ಟಿದ್ದೇವೆ. ಆದರೆ, ಪೂರ್ತಿ ಹಣವನ್ನು ಪಾವತಿಸಲೇಬೇಕು ಎನ್ನುತ್ತಿದ್ದಾರೆ. ಏನು ಮಾಡುವುದೆಂದು ತಿಳಿಯದಾಗಿದೆ’ ಎಂದು ಸಂಬಂಧಿಕರು ಮಾಧ್ಯಮಗಳ ಎದುರು ಅಳಲು ತೋಡಿಕೊಂಡರು.

ನೆಗೆಟಿವ್ ಬಂದರೂ ಚಿಕಿತ್ಸೆ: ಮೂರು ಬಾರಿ ಕೊರೊನಾ ನೆಗೆಟಿವ್ ವರದಿ ಬಂದಿದ್ದರೂ, ಅದನ್ನು ಮುಚ್ಚಿಟ್ಟು ರೋಗಿಯೊಬ್ಬರಿಗೆ ಹೆಬ್ಬಾಳದ ಖಾಸಗಿ ಆಸ್ಪತ್ರೆಯೊಂದು ಚಿಕಿತ್ಸೆ ಮುಂದುವರಿಸಿ, ₹4 ಲಕ್ಷ ಬಿಲ್ ಮಾಡಿದೆ ಎಂದು ರೋಗಿಯ ಸಂಬಂಧಿಕರು ದೂರಿದ್ದಾರೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಹೋಗಿದ್ದರು. ಕೊರೊನಾ ಪಾಸಿಟಿವ್ ಇದೆ ಎಂದು ಹೇಳಿದ ವೈದ್ಯರು, ಚಿಕಿತ್ಸೆ ಮುಂದುವರಿಸಿದ್ದರು. ಆದರೆ, ಬಿಬಿಎಂಪಿ ವರದಿಯಲ್ಲಿ ಮೂರು ಬಾರಿ ನೆಗೆಟಿವ್ ಎಂದು ಬಂದಿತ್ತು. ಆದರೆ, ಪಾಸಿಟಿವ್ ಎಂದು ಸುಳ್ಳು ಹೇಳಿ ₹4 ಲಕ್ಷ ಬಿಲ್ ನೀಡಿದ್ದರು. ಈಗಾಗಲೇ ₹2.50 ಲಕ್ಷ ಪಾವತಿಸಿದ್ದೇವೆ ಎಂದು ಸಂಬಂಧಿಕರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಲಾಯಿತಾದರೂ ಆಸ್ಪತ್ರೆಯವರು ಸಂಪರ್ಕಕ್ಕೆ ಸಿಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.