ಬೆಂಗಳೂರು: ಕೊರೊನಾ ಸೇನಾನಿಗಳಿಗೆ ಪುಷ್ಪಾಲಂಕಾರದ ಮೂಲಕ ವಿಶಿಷ್ಟವಾಗಿ ಗೌರವ ಸಮರ್ಪಣೆ ಮತ್ತು ಅವರ ಆತ್ಮವಿಶ್ವಾಸ ವೃದ್ಧಿಸುವ ಕಾರ್ಯಕ್ರಮಗಳು ಗುರುವಾರ ನಗರದ ವಿವಿಧೆಡೆ ನಡೆದವು.

ವಿಧಾಸಸೌಧದ ಮುಂಭಾಗ ತೋಟಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ಫ್ಲವರ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ ಕಾರ್ಯಕ್ರಮ
ವನ್ನು ತೋಟಗಾರಿಕಾ ಸಚಿವ ನಾರಾಯಣ ಗೌಡ ಕಾರ್ಯಕ್ರಮ ಉದ್ಘಾಟಿಸಿದರು.

1.72 ಲಕ್ಷ ಹೂಗಳನ್ನು ಬಳಸಿ ನಗರದ ವಿವಿಧೆಡೆ ಕೊರೊನಾ ಸೇನಾನಿಗಳನ್ನು ಹೂಗಳಲ್ಲಿ ಚಿತ್ರಿಸಲಾಗಿದೆ. ಶನಿವಾರದವರೆಗೆ ಈ ಪುಷ್ಪಾಲಂಕಾರಗಳು ಜನರನ್ನು ಆಕರ್ಷಿಸಲಿವೆ.

ಫ್ರೇಜರ್ ಟೌನ್, ಯುಬಿ ಸಿಟಿಯ ಕಾಫಿಡೇ ವೃತ್ತ, ಬೌರಿಂಗ್ ಆಸ್ಪತ್ರೆ, ವಿಂಡ್ಸರ್ ಮ್ಯಾನರ್ ವೃತ್ತ, ಪೊಲೀಸ್ ಅಯುಕ್ತರ ಕಚೇರಿ, ಅನಿಲ್ ಕುಂಬ್ಳೆ ವೃತ್ತ, ಮಿನ್ಕ್ಸ್ ಚೌಕ, ಪುರಭವನ, ವೈಟ್‌ಫೀಲ್ಡ್ ಪೊಲೀಸ್ ಠಾಣೆ ಹಾಗೂ ಜಯನಗರ ಪೊಲೀಸ್ ಠಾಣೆ ಬಳಿ ಈ ಅಲಂಕಾರ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.