ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಒಂದೇ ಕುಟುಂಬದ ಮೂವರಿಗೆ ಸೋಂಕು

ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 434ಕ್ಕೆ ಏರಿಕೆ, 149 ಮಂದಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ
Last Updated 5 ಜೂನ್ 2020, 22:07 IST
ಅಕ್ಷರ ಗಾತ್ರ

ಬೆಂಗಳೂರು: ರೂಪೇನ ಅಗ್ರಹಾರದ ಒಂದೇ ಕುಟುಂಬದ ಮೂವರು ಸೇರಿದಂತೆ ಒಂದೇ ದಿನ 10 ಮಂದಿ ಕೊರೊನಾ ಸೋಂಕಿತರಾಗಿದ್ದು, ನಗರದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 434ಕ್ಕೆ ಏರಿಕೆಯಾಗಿದೆ.

ಕೆಲ ದಿನಗಳ ಹಿಂದೆ ರೂಪೇನ ಅಗ್ರಹಾರದಲ್ಲಿ25 ವರ್ಷದ ಯುವತಿಗೆ ಸೋಂಕು ತಗುಲಿತ್ತು. ಅವರ ಸಂಪರ್ಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸ ಲಾಗಿತ್ತು. ಈಗ ಅವರ ಕುಟುಂಬದ ಸದಸ್ಯರು ಸೋಂಕಿತರಾಗುತ್ತಿದ್ದಾರೆ. ಅವರ ಸಂಪರ್ಕದಿಂದ 65 ವರ್ಷದ ವ್ಯಕ್ತಿಗೆ ಗುರುವಾರ ಸೋಂಕು ತಗುಲಿತ್ತು. ಈಗ ಮತ್ತೆ ಮೂವರಿಗೆ ಸೋಂಕು ತಗುಲಿರುವುದು ಆತಂಕಕ್ಕೆ ಕಾರಣವಾಗಿದೆ. 30 ವರ್ಷದ ಮಹಿಳೆ, 28 ವರ್ಷದ ಯುವಕ ಹಾಗೂ 55 ವರ್ಷದ ಮಹಿಳೆ ಸೋಂಕಿತರಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಅವರ ಕುಟುಂಬದ ಇನ್ನೂ 4 ಮಂದಿ ಕ್ವಾರಂಟೈನ್‌ನಲ್ಲಿ ಇದ್ದಾರೆ.

ದೆಹಲಿಯಿಂದ ಮೂವರು ಹಾಗೂ ಮಹಾರಾಷ್ಟ್ರ, ತಮಿಳುನಾಡಿನಿಂದ ಬಂದ ತಲಾ ಒಬ್ಬರಿಗೆ ಸೋಂಕು ತಗು ಲಿದೆ.ಅಮರಜ್ಯೋತಿ ಬಡಾವಣೆಯ 24 ವರ್ಷದ ಯುವತಿ ಸೋಂಕಿತರಾಗಿದ್ದಾರೆ. ಅವರು ದೆಹಲಿಯಿಂದ ಕೆಲ ದಿನಗಳ ಹಿಂದೆ ನಗರಕ್ಕೆ ಬಂದಿದ್ದರು. ಸರ್ಜಾಪುರ ರಸ್ತೆಯ ನಿವಾಸಿಯಾಗಿರುವ 18 ವರ್ಷದ ಯುವಕ ಕಾಯಿಲೆ ಪೀಡಿತನಾಗಿದ್ದು, ಅವರು ಕೂಡ ದೆಹಲಿಗೆ ಪ್ರಯಾಣ ಮಾಡಿದ ಇತಿಹಾಸ ಹೊಂದಿದ್ದಾರೆ. ಇಂಡೋನೇಷ್ಯಾದಿಂದ ಬಂದಿದ್ದ 42 ವರ್ಷದ ವ್ಯಕ್ತಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಿದ್ದರು. ಕೋವಿಡ್‌ ಪರೀಕ್ಷೆಯ ಬಳಿಕ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರು ಕೆ.ಜಿ. ಹಳ್ಳಿಯ ನಿವಾಸಿಯಾಗಿದ್ದಾರೆ. ಚೆನ್ನೈನಿಂದ ವಾಪಸ್‌ ಆಗಿದ್ದ ಹಾರೋಹಳ್ಳಿಯ 24 ವರ್ಷದ ವ್ಯಕ್ತಿ ಕೋವಿಡ್‌ ಪೀಡಿತರಾಗಿದ್ದಾರೆ.

ಮುಂಬೈನಿಂದ ವಾಪಸ್ ಆಗಿದ್ದ 31 ವರ್ಷದ ವ್ಯಕ್ತಿಗೆ ರೋಗಿಯ ಸಂಪ ರ್ಕದಿಂದ ರೋಗ ತಗುಲಿದೆ. ಮಹಾರಾಷ್ಟ್ರದಿಂದ ಬಂದಿದ್ದ ಬನಶಂಕರಿಯ ಯಾರಬ್ ನಗರದ 68 ವರ್ಷದ ವೃದ್ಧ ಸೋಂಕಿತರಾಗಿದ್ದಾರೆ. ದೆಹಲಿ ಪ್ರಯಾಣದ ಇತಿಹಾಸ ಹೊಂದಿರುವ 23 ವರ್ಷದ ಯುವಕನಿಗೆ ಕೋವಿಡ್‌ ಕಾಯಿಲೆ ಬಂದಿದೆ. ನಗರದಲ್ಲಿ ಈವರೆಗೆ 271 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. 149 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಗುಣಮಟ್ಟದ ಪಿಪಿಇ ಕಿಟ್‌: ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ
‘ಗುಣಮಟ್ಟದ ಪಿಪಿಇ ಕಿಟ್‌ಗಳು ರಾಜ್ಯದ ಮುಕ್ತ ಮಾರುಕಟ್ಟೆ ಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಪಿಪಿಇ ಕಿಟ್‌ಗಳ ಕೊರತೆ ಹಾಗೂ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಡಾ.ರಾಜೀವ್ ಗೋಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಸದ್ಯ ಖಾಸಗಿ ಆಸ್ಪತ್ರೆಯ ಹಾಗೂ ಕ್ಲಿನಿಕ್‌ನಲ್ಲಿ ವೈದ್ಯರು ಪಿಪಿಇ ಕಿಟ್‌ಗಳನ್ನು ಬಳಸುವುದರಿಂದ ಇದೊಂದು ಬಹಳ ಮುಖ್ಯವಾದ ವಿಚಾರ. ಆದ್ದರಿಂದ ಗುಣಮಟ್ಟದ ಪಿಪಿಇ ಕಿಟ್‌ಗಳು ರಾಜ್ಯದ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು’ ಎಂದು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT