ಬೆಂಗಳೂರು: ಅನ್ಲಾಕ್ 1.0 ಆದ ಕೂಡಲೇ ಕೋವಿಡ್-19 ರೋಗಿಗಳ ಸಂಖ್ಯೆ ಏರಿಕೆಯಾಗಿದ್ದು ರಾಜ್ಯದಾದ್ಯಂತ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳ ಮಾಹಿತಿಗಳನ್ನು ಬಹಿರಂಗ ಪಡಿಸುವುದನ್ನು ಆರೋಗ್ಯ ಅಧಿಕಾರಿಗಳು ನಿಲ್ಲಿಸಿದ್ದಾರೆ.ಅದೇ ವೇಳೆ ಐಸಿಯುನಲ್ಲಿದ್ದ 22 ರೋಗಿಗಳ ಬಗ್ಗೆ ಮಾಹಿತಿಯೇ ಲಭ್ಯವಿಲ್ಲ.

ಕರ್ನಾಟಕದಲ್ಲಿ ಕೋವಿಡ್ ರೋಗ ಹರಡುವಿಕೆ ಆರಂಭವಾದ ಸಮಯದಲ್ಲಿ ಅಂದರೆ ಮಾರ್ಚ್ 9ರಿಂದ ಜೂನ್ 15ರವರೆಗೆ ಐಸಿಯುನಲ್ಲಿ 110 ರೋಗಿಗಳು ಇದ್ದರು. ಜೂನ್ 30, ಮಂಗಳವಾರದವರೆಗೆ ಸಿಕ್ಕಿದ ಮಾಹಿತಿ ಪ್ರಕಾರ ಈ ಸಂಖ್ಯೆ 271ಕ್ಕೆ ಏರಿಕೆ ಆಗಿದೆ. ಆದಾಗ್ಯೂ ಐಸಿಯುನಲ್ಲಿರುವ ರೋಗಿಗಳ ಮಾಹಿತಿಯನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ.

ಕೊನೇ ಬಾರಿ ಐಸಿಯು ರೋಗಿಗಳ ವರದಿ ಬಹಿರಂಗಪಡಿಸಿದ್ದು ಜೂನ್ 15ರಂದು. ಈ ಮಾಹಿತಿಗಳ ಪ್ರಕಾರ 20 ರೋಗಿಗಳು ( ಶೇ18.1) ಸಾವಿಗೀಡಾಗಿದ್ದಾರೆ ಮತ್ತು 68 ಮಂದಿ ಚೇತರಿಸಿಕೊಂಡಿದ್ದಾರೆ. ಇನ್ನುಳಿದ 22 ರೋಗಿಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ.

ಈ ಪೈಕಿ ಬೆಂಗಳೂರು ನಗರದಿಂದ 9, ಕಲಬುರ್ಗಿ-5, ಬಳ್ಳಾರಿ-3 ಮತ್ತು ಉಡುಪಿ, ಧಾರವಾಡ, ದಕ್ಷಿಣ ಕನ್ನಡ, ವಿಜಯಪುರ ಮತ್ತು ರಾಮನಗರದಿಂದ ತಲಾ ಒಬ್ಬ ರೋಗಿ ಇದ್ದಾರೆ.

ಈ ಪ್ರಕರಣಗಳಲ್ಲಿ ಹೆಚ್ಚಿನವು ಜೂನ್ ಮೊದಲವಾರದ್ದು ಆಗಿದ್ದು, ಒಂದು ಪ್ರಕರಣ ಏಪ್ರಿಲ್ನಲ್ಲಿ ದಾಖಲಾದುದು ಆಗಿದೆ..ರೋಗಿ ಸಂಖ್ಯೆ 349, ಬೆಂಗಳೂರು ಸುಧಾಮನಗರದ 64ರ ಹರೆಯದ ವ್ಯಕ್ತಿಗೆ ತೀವ್ರ ಉಸಿರಾಟದ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು.ಏಪ್ರಿಲ್ 17ಕ್ಕೆ ಇವರಿಗೆ ಕೋವಿಡ್-19 ದೃಢಪಟ್ಟಿತ್ತು. ಇದಾಗಿ 11 ವಾರಗಳೇ ಕಳೆದಿದ್ದರೂ ಆ ರೋಗಿ ಚೇತರಿಸಿಕೊಂಡಿದ್ದಾರೆಯೇ ಅಥವಾ ಮರಣ ಹೊಂದಿದ್ದಾರೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಆರ್ಡಿಐಸಿಡಿ ಮತ್ತು ವಿಕ್ಟೋರಿಯಾ ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಕೋವಿಡ್ ರೋಗ ಹರಡುವಿಕೆಯ ಆರಂಭದಲ್ಲಿ ಕೆಲವೊಂದು ರೋಗಿಗಳ ಮಾಹಿತಿಗಳನ್ನು ಸರಿಯಾಗಿ ಸಂಗ್ರಹಿಸದೇಇರುವುದು ಕೂಡಾ ಮಾಹಿತಿ ಅಪೂರ್ಣವಾಗಿರಲು ಕಾರಣ. ನಾವು ಎಲ್ಲ ಮಾಹಿತಿಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಬಿಬಿಎಂಪಿ ಕೋವಿಡ್ ವಾರ್ರೂಂನ ನಿರ್ದೇಶಕಿ ಹೆಫ್ಸಿಬಾ ರಾಣಿ ಕೊರ್ಲಾಪತಿ ಹೇಳಿದ್ದಾರೆ.

ಆದಾಗ್ಯೂ,ಯಾವ ರೋಗಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದೆಂಬುದರ ಬಗ್ಗೆ ಮೇ26ರಂದು ರಾಜ್ಯ ಸರ್ಕಾರ ನೀಡಿದ ಮಾಹಿತಿ ಪ್ರಕಾರ 10 ದಿನ ಆಸ್ಪತ್ರೆಯಲ್ಲಿ ಕಳೆದ ನಂತರ ರೋಗಿಯನ್ನು ಮನೆಗೆ ಕಳುಹಿಸಬಹುದು. ಅದೇ ವೇಳೆ ಐಸಿಯುನಲ್ಲಿದ್ದ ರೋಗಿಗೆ 12.4 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ನಂತರ ಮನೆಗೆ ಕಳುಹಿಸಬಹುದಾಗಿದೆ.

ವಿಪರ್ಯಾಸ ಎಂದರೆ ಮಾಹಿತಿನಾಪತ್ತೆಯಾಗಿರುವ ರೋಗಿಗಳೆಲ್ಲರೂ ಐಸಿಯುನಲ್ಲಿ 15 ದಿನ ಚಿಕಿತ್ಸೆ ಪಡೆದವರಾಗಿದ್ದಾರೆ.

ಈ ರೋಗಿಗಳ ಮಾಹಿತಿ ಲಭ್ಯವಿಲ್ಲ: ರೋಗಿಯ ಸಂಖ್ಯೆ -349, 5333, 5784, 6023, 6035, 6036, 6128, 6162 ಮತ್ತು 6365 (ಬೆಂಗಳೂರು), ರೋಗಿಯ ಸಂಖ್ಯೆ -5452 (ಉಡುಪಿ), ರೋಗಿಯ ಸಂಖ್ಯೆ -5498, 5520, 6181, 6740, 6805 (ಕಲಬುರ್ಗಿ), ರೋಗಿಯ ಸಂಖ್ಯೆ - 5955, 6432, 7102 (ಬಳ್ಳಾರಿ), ರೋಗಿಯ ಸಂಖ್ಯೆ 6252 (ಧಾರವಾಡ), ರೋಗಿಯ ಸಂಖ್ಯೆ -6283 (ದಕ್ಷಿಣ ಕನ್ನಡ), ರೋಗಿಯ ಸಂಖ್ಯೆ -6587 (ವಿಜಯಪುರ), ರೋಗಿಯ ಸಂಖ್ಯೆ -6855 (ರಾಮನಗರ).

ಇದರಲ್ಲಿ 14 ಮಂದಿ ಗಂಡಸರಾಗಿದ್ದಾರೆ. 13 ಮಂದಿ 50ಕ್ಕಿಂತ ಹೆಚ್ಚು ವಯಸ್ಸಿನವರು. ಏತನ್ಮಧ್ಯೆ ಕಲಬುರ್ಗಿಯ 20ರ ಹರೆಯದ ಮಹಿಳೆ (ರೋಗಿಯ ಸಂಖ್ಯೆ -6181) ಮತ್ತು ಆಕೆಯ ಇಬ್ಬರು ಮಕ್ಕಳು (9 ಮತ್ತು 4 ವರ್ಷದವರು) ಈ ಪಟ್ಟಿಯಲ್ಲಿದ್ದಾರೆ. ಬೆಂಗಳೂರು , ಕಲಬುರ್ಗಿ ಮತ್ತು ಬಳ್ಳಾರಿಯಿಂದ ನಾಪತ್ತೆಯಾದವರಲ್ಲಿ 5 ಮಂದಿ 30ರ ಹರೆಯದವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.