ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ಪರೀಕ್ಷಾ ದರ ಮತ್ತಷ್ಟು ಇಳಿಕೆ

Last Updated 16 ಅಕ್ಟೋಬರ್ 2020, 20:23 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ವಿವಿಧ ಮಾದರಿಯ ಕೋವಿಡ್ ಪರೀಕ್ಷೆಗಳ ದರವನ್ನು ಪರಿಷ್ಕರಣೆ ಮಾಡಲಾಗಿದ್ದು,ಆರ್‌ಟಿ–ಪಿಸಿಆರ್ ಪರೀಕ್ಷೆಗೆ ಸರ್ಕಾರವು ಖಾಸಗಿ ಪ್ರಯೋಗಾಲಯಗಳಿಗೆ ರವಾನಿಸುವ ಪ್ರತಿ ಮಾದರಿಗೆ ₹ 800 ನಿಗದಿಪಡಿಸಲಾಗಿದೆ.

ಈ ಸಂಬಂಧ ಸರ್ಕಾರವು ಆದೇಶ ಹೊರಡಿಸಿದೆ.ಕೋವಿಡ್‌ ಕಾರ್ಯಪಡೆಯಲ್ಲಿ ಚರ್ಚಿಸಿ, ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ಪರೀಕ್ಷೆಗಳ ದರವನ್ನು ಇಳಿಕೆ ಮಾಡಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನಿಂದ (ಐಸಿಎಂಆರ್) ಮಾನ್ಯತೆ ಪಡೆದ ರಾಜ್ಯದ ಪ್ರಯೋಗಾಲಯಗಳಿಗೆ ಮಾತ್ರ ನೂತನ ದರ ಅನ್ವಯವಾಗುತ್ತದೆ. ತಪಾಸಣೆ ಹಾಗೂ ದೃಢಪಡಿಸುವ ಪರೀಕ್ಷೆಗಳ ಶುಲ್ಕ ಹಾಗೂ ಪಿಪಿಇ ಕಿಟ್‌ ವೆಚ್ಚ ಕೂಡ ನಿಗದಿತ ದರದಲ್ಲಿಯೇ ಸೇರಿರಲಿದ್ದು, ಹೆಚ್ಚುವರಿ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸೋಂಕು ಶಂಕಿತರ ಪ್ರತಿ ಮಾದರಿಯ ಸಂಗ್ರಹಣೆ ಹಾಗೂ ಪ್ರಯೋಗಾಲಯಗಳಿಗೆ ರವಾನೆ ಮಾಡುವುದಕ್ಕೆ ₹ 400 ನಿಗದಿಪಡಿಸಲಾಗಿದೆ. ವ್ಯಕ್ತಿ ನೇರವಾಗಿ ಪ್ರಯೋಗಾಲಯಕ್ಕೆ ತೆರಳಿ ಮಾಡಿಸಿಕೊಳ್ಳುವ ಆರ್‌ಟಿ–ಪಿಸಿಆರ್ ಪರೀಕ್ಷೆಯ ಶುಲ್ಕವನ್ನು ₹ 1,200ಕ್ಕೆ ಇಳಿಕೆ ಮಾಡಲಾಗಿದೆ. ಖಾಸಗಿ ಪ್ರಯೋಗಾಲಯದವರೇ ಸ್ಥಳೀಯವಾಗಿ ಮಾದರಿಗಳನ್ನು ಸಂಗ್ರಹಿಸಿ, ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಸಿದಲ್ಲಿ ₹ 1,600 ಪಾವತಿಸಬೇಕಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ರ್‍ಯಾಪಿಟ್ ಆ್ಯಂಟಿಬಾಡಿ ಪರೀಕ್ಷೆಗೆ ₹ 500 ಹಾಗೂ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗೆ ₹ 700 ನಿಗದಿಪಡಿಸಲಾಗಿದೆ. ಈ ಮೊದಲು ಸರ್ಕಾರವು ಖಾಸಗಿ ಪ್ರಯೋಗಾಲಯಗಳಿಗೆ ಆರ್‌ಟಿ–ಪಿಸಿಆರ್ ಪರೀಕ್ಷೆಗೆ ರವಾನಿಸುವ ಪ್ರತಿ ಮಾದರಿಯ ಪರೀಕ್ಷೆಗೆ ₹ 1,200, ವ್ಯಕ್ತಿ ನೇರವಾಗಿ ಪ್ರಯೋಗಾಲಯಗಳಿಗೆ ತೆರಳಿ ಮಾಡಿಸಿಕೊಳ್ಳುವ ಪರೀಕ್ಷೆಗೆ ₹ 1,600 ಪಾವತಿಸಬೇಕಾಗಿತ್ತು.

ವ್ಯಕ್ತಿ ನೇರವಾಗಿ ಪ್ರಯೋಗಾಲಯಕ್ಕೆ ತೆರಳಿ ಮಾಡಿಸಿಕೊಳ್ಳುವ ಟ್ರೂ ನ್ಯಾಟ್ ಪರೀಕ್ಷೆಗೆ ₹ 2,220, ಪ್ರಯೋಗಾಲಯದವರೇ ಮನೆಗೆ ಬಂದು ಮಾದರಿ ಸಂಗ್ರಹಿಸಿ, ಈ ಮಾದರಿಯ ಪರೀಕ್ಷೆ ನಡೆಸಿದಲ್ಲಿ ₹ 2,600 ದರ ನಿಗದಿ ಮಾಡಲಾಗಿದೆ. ಸಿಬಿ ನ್ಯಾಟ್ ಪರೀಕ್ಷೆಯ ದರವನ್ನೂ ಪರಿಷ್ಕರಣೆ ಮಾಡಲಾಗಿದ್ದು, ವ್ಯಕ್ತಿ ಪ್ರಯೋಗಾಲಯಕ್ಕೆ ತೆರಳಿ ಈ ಮಾದರಿಯ ಪರೀಕ್ಷೆ ಮಾಡಿಸಿಕೊಂಡಲ್ಲಿ ₹ 3,800 ಹಾಗೂ ಪ್ರಯೋಗಾಲಯದವರು ಮನೆಗೆ ಬಂದು ಮಾದರಿ ಸಂಗ್ರಹಿಸಿ ನಡೆಸುವ ಪರೀಕ್ಷೆಗೆ ₹ 4,200 ಪಾವತಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT