ಶನಿವಾರ, ಜೂಲೈ 11, 2020
28 °C

ಕೋವಿಡ್‌ ಯೋಧರ ಓಡಾಟಕ್ಕೆ ‘ಬೌನ್ಸ್‌’ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌–19 ಯೋಧರ ಓಡಾಟಕ್ಕೆ ನೆರವಾಗಲು ‘ಬೌನ್ಸ್‌’ ಬಾಡಿಗೆ ಬೈಕ್‌ಗಳ ಸಂಸ್ಥೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸ್ಕೂಟರ್‌ ಹೀರೋ ಸೇವೆಯನ್ನು ಅದು ಆರಂಭಿಸಿದೆ. 

ಯಾರು ಬೇಕಾದರೂ scooterhero.bounceshare.com ನಲ್ಲಿ ಸೈನ್‌ ಅಪ್ ಆಗಿ, ತಮ್ಮ ದ್ವಿಚಕ್ರ ವಾಹನಗಳನ್ನು ಕೋವಿಡ್- 19 ವಾರಿಯರ್‌ಗಳ ಬಳಕೆಗೆ ಒದಗಿಸಬಹುದು.

ಜನ ತಮ್ಮ ಬೈಕ್, ಸ್ಕೂಟರ್‌ಗಳನ್ನು ‘ಸ್ಕೂಟರ್‌ಹೀರೋ’ ಪಟ್ಟಿಗೆ ಸೇರಿಸಿ, ಹಂಚಿಕೊಳ್ಳುವ ಅವಕಾಶವನ್ನು ಬೌನ್ಸ್ ಒದಗಿಸಿದೆ. ಈ ಪಟ್ಟಿಗೆ ಸೇರಿಸುವ ಪ್ರತಿಯೊಬ್ಬರು ತಮ್ಮ  ಬೈಕನ್ನು ಉಚಿತವಾಗಿ ಬಳಕೆಗೆ ಕೊಡುವ ಇಲ್ಲವೆ ದಿನಕ್ಕೆ ₹80 ಶುಲ್ಕ ವಿಧಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಇದರಿಂದ, ಆರ್ಥಿಕವಾಗಿ ಕುಗ್ಗಿರುವ ಸಾವಿರಾರು ಮಂದಿಗೆ, ಸುಮ್ಮನೆ ನಿಂತಿರುವ ತಮ್ಮ ವಾಹನದಿಂದ ಸ್ವಲ್ಪ ಹಣಗಳಿಸಲು ನೆರವಾಗಬಹುದು. ಅಲ್ಲದೆ, ಕೋವಿಡ್‌–19 ಯೋಧರಿಗೂ ಓಡಾಡಲು ಸಹಾಯವಾಗಬಹುದು ಎಂದು ಕಂಪನಿ ಹೇಳಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು