ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಕೇರ್ ಕೇಂದ್ರದಲ್ಲಿ ಮದ್ಯ ಪೂರೈಕೆ?

Last Updated 5 ಆಗಸ್ಟ್ 2020, 16:38 IST
ಅಕ್ಷರ ಗಾತ್ರ

ಬೆಂಗಳೂರು: ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ನಿರ್ಮಿಸಿರುವ ’ಕೋವಿಡ್ ಕೇರ್’ ಕೇಂದ್ರದಲ್ಲಿ ಅಕ್ರಮವಾಗಿ ಮದ್ಯ ಪೂರೈಕೆ ಆಗುತ್ತಿರುವ ಅನುಮಾನ ವ್ಯಕ್ತವಾಗಿದೆ.

ಬುಧವಾರ ಸಂಜೆ ದ್ವಿಚಕ್ರ ವಾಹನದಲ್ಲಿ ಕೇಂದ್ರದೊಳಗೆ ತೆರಳುತ್ತಿದ್ದ ಯುವಕನೊಬ್ಬ ಮದ್ಯದ ಪೊಟ್ಟಣಗಳ ಸಮೇತ ಬಿಬಿಎಂಪಿ ಮಾರ್ಷಲ್‌ಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಮಾದನಾಯಕನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕೇಂದ್ರವಿದ್ದು, ಮದ್ಯ ಪೂರೈಕೆ ಬಗ್ಗೆ ತಡರಾತ್ರಿಯವರೆಗೂ ಯಾವುದೇ ದೂರು ದಾಖಲಾಗಿಲ್ಲ.

ಕೇಂದ್ರಕ್ಕೆ ಬರುವ ಹಾಗೂ ಹೊರಗೆ ಹೋಗುವವರನ್ನು ತಪಾಸಣೆ ಮಾಡಲಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಯುವಕನ ಬಳಿ ಮದ್ಯದ ಎರಡು ಟೆಟ್ರಾ ಪೊಟ್ಟಣ ಸಿಕ್ಕಿದ್ದರಿಂದಾಗಿ ಮಾರ್ಷಲ್‌ಗಳು ವಿಚಾರಣೆ ನಡೆಸಿದ್ದರು.

‘ಕೇಂದ್ರದಲ್ಲಿ ಸ್ವಚ್ಛತೆ ಕೆಲಸ ಮಾಡುತ್ತೇನೆ. ನನ್ನ ವೈಯಕ್ತಿಕ ಬಳಕೆಗಾಗಿ ಈ ಮದ್ಯದ ಪೊಟ್ಟಣ ಇಟ್ಟುಕೊಂಡಿದ್ದೇನೆ’ ಎಂದು ಯುವಕ ಹೇಳಿದ್ದ. ನಂತರ ಆತನನ್ನು ಬಿಟ್ಟು ಕಳುಹಿಸಿರುವ ಮಾರ್ಷಲ್‌ಗಳು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT