ಭಾನುವಾರ, ಫೆಬ್ರವರಿ 28, 2021
21 °C
ಮೊಬೈಲ್ ಸ್ವಿಚ್‌ ಆಫ್‌ ಮಾಡಿದರೂ ಶಿಕ್ಷೆ: ಕಾಯ್ದೆಯಲ್ಲಿ ಅವಕಾಶ

ಕೋವಿಡ್‌: ಸರ್ಕಾರದ ಕಣ್ಣು ತಪ್ಪಿಸಿದರೆ ಕಠಿಣ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ’ಗೆ ತಿದ್ದುಪಡಿ ತಂದಿದ್ದು, ಸೋಂಕಿತ ವ್ಯಕ್ತಿಗಳು ವೈದ್ಯರು ಮತ್ತು ಸರ್ಕಾರಕ್ಕೆ ಸಹಕರಿಸದೇ ಇದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬಹುದಾಗಿದೆ.

ಅಲ್ಲದೆ, ವಿದೇಶಗಳಿಂದ ಬಂದವರು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ಶಂಕಿತ ರೋಗಿಗಳು ದೂರವಾಣಿ ಸ್ವಿಚ್‌ ಆಫ್‌ ಮಾಡುವುದು ಕೂಡಾ ಸರ್ಕಾರಕ್ಕೆ ಅಸಹಕಾರ ತೋರುವುದಕ್ಕೆ ಸಮವಾಗಿದ್ದು, ಅಂತಹವರನ್ನು ಶಿಕ್ಷೆಗೆ ಗುರಿ ಪಡಿಸಬಹುದಾಗಿದೆ ಎಂದು ಮೂಲಗಳು ಹೇಳಿವೆ.

ವಿಶೇಷವಾಗಿ ಆಶಾ ಕಾರ್ಯಕರ್ತೆಯರು, ವೈದ್ಯರು ಮತ್ತು ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಉದ್ದೇಶಪೂರ್ವಕವಾಗಿ ಸೋಂಕು ಹರಡಿಸುವವರು ಮತ್ತು ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಗೂಂಡಾ ಕಾಯ್ದೆ ಹಾಕಿ, ಆಸ್ತಿ ಮುಟ್ಟುಗೋಲು ಹಾಕಲು ಮತ್ತು ದಂಡ ವಸೂಲಿ ಮಾಡಲು  ಅವಕಾಶ ಕಲ್ಪಿಸಲಾಗಿದೆ. ರೋಗ ಹರಡುವುದನ್ನು ತಡೆಗಟ್ಟಲು ಶಂಕಿತ ಕೋವಿಡ್‌ ರೋಗಿಗಳ ಚಲನೆಯನ್ನು ನಿರ್ಬಂಧಿಸಲು ಈ ಕಾಯ್ದೆಯನ್ನು ಬಳಸಬಹುದಾಗಿದೆ.

ಈ ಕಾಯ್ದೆಯಡಿ ಮಾಡಿದ ಯಾವುದೇ ನಿಯಂತ್ರಣ ಅಥವಾ ಆದೇಶವನ್ನು ಧಿಕ್ಕರಿಸುವ ಯಾವುದೇ ವ್ಯಕ್ತಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 188 ರ ಅಡಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು