ಮಾಸ್ಕ್ ಧರಿಸಿ ಪಾಲ್ಗೊಂಡ ಸಿ.ಎಂ
ಕೋವಿಡ್ ಪ್ರಕರಣಗಳ ಸಂಖ್ಯೆ ಕೊಂಚ ಹೆಚ್ಚುತ್ತಿವೆ ಎಂಬ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಶನಿವಾರ ಮಾಸ್ಕ್ ಧರಿಸಿ ಕಾಣಿಸಿಕೊಂಡರು. ಬೆಳಿಗ್ಗೆ ಇಲ್ಲಿನ ಶಾರದಾದೇವಿ ನಗರದ ತಮ್ಮ ಮನೆಯ ಬಳಿಗೆ ಬಂದಿದ್ದ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ವೇಳೆ ಹಾಗೂ ತಾಲ್ಲೂಕಿನ ಹಿನಕಲ್‌ನಲ್ಲಿ ನಡೆದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮ ದಲ್ಲಿ ಮಾಸ್ಕ್ ಹಾಕಿಕೊಂಡಿದ್ದರು. ಅವರ ಪುತ್ರ, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಕೂಡ ಮಾಸ್ಕ್ ಧರಿಸಿದ್ದರು. ಆದರೆ, ನಂತರ ಕಲಾಮಂದಿರದಲ್ಲಿ ಬಸವ ಬಳಗಗಳ ಒಕ್ಕೂಟವು ಆಯೋಜಿಸಿದ್ದ ‘ನಮ್ಮ ಬಸವ ಜಯಂತಿ’ ಸಮಾರಂಭದಲ್ಲಿ ಮುಖ್ಯಮಂತ್ರಿ ಮಾಸ್ಕ್ ಧರಿಸಿರಲಿಲ್ಲ.