ಶುಕ್ರವಾರ, ಜನವರಿ 22, 2021
21 °C

ಕೋವಿಡ್‌ ಲಸಿಕೆ : ತಾಲೀಮು ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್‌ ಲಸಿಕೆ ನೀಡುವ ಬಗ್ಗೆ ಇದೇ ಶುಕ್ರವಾರ ವಿಶೇಷ ತಾಲೀಮು ಏರ್ಪಡಿಸಲಾಗಿದೆ.

ಎಂಟು ವಲಯಗಳ ಸಾರ್ವಜನಿಕ ಆರೋಗ್ಯ ಕೇಂದ್ರ, ರೆಫೆರಲ್ ಆಸ್ಪತ್ರೆ, ಮೆಡಿಕಲ್ ಕಾಲೇಜು, ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ತಾಲೀಮು ಬೆಳಗ್ಗೆ 9ರಿಂದ 11ರವರೆಗೆ ನಡೆಯಲಿದೆ ಎಂದು  ಪಾಲಿಕೆ ಮುಖ್ಯ ಆರೊಗ್ಯಾಧಿಕಾರಿ ಡಾ.ಬಿ.ಕೆ.ವಿಜಯೇಂದ್ರ  ತಿಳಿಸಿದ್ದಾರೆ.

ಲಸಿಕೆ ತಾಲೀಮು ನಡೆಸಲು ಪ್ರತಿ ವಲಯದಲ್ಲಿ ತಲಾ ಒಂದು ಸ್ಥಳವನ್ನು ಗೊತ್ತುಪಡಿಸಲಾಗಿದೆ.

ಲಸಿಕೆ ತಾಲೀಮು ನಡೆಯುವ ಸ್ಥಳಗಳು

ವಲಯ; ಸ್ಥಳ

ಬೊಮ್ಮನಹಳ್ಳಿ: ಸಿಂಗಸಂದ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ

ದಾಸರಹಳ್ಳಿ: ಸಪ್ತಗಿರಿ ವೈದ್ಯಕೀಯ ಕಾಲೇಜು

ಪೂರ್ವ: ಹಲಸೂರು ರೆಫೆರಲ್ ಆಸ್ಪತ್ರೆ

ಮಹದೇವಪುರ: ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆ

ಆರ್.ಆರ್‌.ನಗರ: ಕೆಂಗೇರಿ ಸಮುದಾಯ ಆರೋಗ್ಯ ಕೇಂದ್ರ

ದಕ್ಷಿಣ: ಕಿಮ್ಸ್ ವೈದ್ಯಕೀಯ ಕಾಲೇಜು

ಪಶ್ಚಿಮ: ಬೆಂಗಳೂರು ವೈದ್ಯಕೀಯ ಕಾಲೇಜು

ಯಲಹಂಕ: ಆ್ಯಸ್ಟರ್ ಸಿಎಂಐ ಆಸ್ಪತ್ರೆ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು