ಬೆಂಗಳೂರು: ‘ಫೋನ್ ಪೇ’ ಆ್ಯಪ್ನಿಂದ ₹ 5 ಸಾವಿರ ಕಮಿಷನ್ ಬಂದಿರುವುದಾಗಿ ಹೇಳಿದ್ದ ಸೈಬರ್ ಖದೀಮನೊಬ್ಬ, ನಗರದ ನಿವಾಸಿಯೊಬ್ಬರ ಬ್ಯಾಂಕ್ ಖಾತೆ ಮಾಹಿತಿ ಪಡೆದು ₹ 3.32 ಲಕ್ಷ ಡ್ರಾ ಮಾಡಿಕೊಂಡು ವಂಚಿಸಿದ್ದಾನೆ.

ಈ ಸಂಬಂಧ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕಿರಾಣಿ ಅಂಗಡಿ ಇಟ್ಟುಕೊಂಡಿರುವ ದೂರುದಾರನಿಗೆ ಮೇ 29ರಂದು ಕರೆ ಮಾಡಿದ್ದ ವಂಚಕ, ₹5 ಸಾವಿರ ಕಮಿಷನರ್ ಬಂದಿರುವುದಾಗಿ ಆಮಿಷವೊಡ್ಡಿದ್ದ. ಅದನ್ನು ಖಾತೆಗೆ ಜಮೆ ಮಾಡಲು ಡೇಬಿಟ್ ಕಾರ್ಡ್ ಹಾಗೂ ಪಾಸ್ವರ್ಡ್ ಕೇಳಿದ್ದ. ಆತನ ಮಾತು ನಂಬಿದ್ದ ದೂರುದಾರ, ಮಾಹಿತಿ ಹಂಚಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಅಂದಿನಿಂದ ಜೂನ್ 5ರವರೆಗೆ ಆರೋಪಿ, ದೂರುದಾರರ ಖಾತೆಯಲ್ಲಿದ್ದ ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಇದು ಗೊತ್ತಾಗುತ್ತಿದ್ದಂತೆ ದೂರುದಾರರು, ಠಾಣೆಗೆ ಬಂದು ದೂರು ನೀಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.