ಗುರುವಾರ , ಮಾರ್ಚ್ 23, 2023
32 °C

ಬೈಕ್ ಕದ್ದಿದ್ದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಬೈಕ್‍ಗಳನ್ನು ಕದ್ದಿದ್ದ ಆರೋಪಿಯನ್ನು ಬಸವೇಶ್ವರ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಕುರುಬರಹಳ್ಳಿಯ ಕಾವೇರಿ ನಗರದ ನಿವಾಸಿ ವಿನಾಯಕ (21) ಬಂಧಿತ ಆರೋಪಿ. ಆ.8ರಂದು ಬಸವೇಶ್ವರ ನಗರದಲ್ಲಿ ಬೈಕ್ ಕಳವು ಆಗಿರುವುದಾಗಿ ದೂರು ದಾಖಲಾಗಿತ್ತು.

ಬಸವೇಶ್ವರನಗರ, ಪೀಣ್ಯ, ಮಹಾಲಕ್ಷ್ಮೀ ಬಡಾವಣೆ, ಬ್ಯಾಟರಾಯನಪುರ, ಅನ್ನಪೂರ್ಣೇಶ್ವರಿ ನಗರ, ವಿಜಯನಗರ ಹಾಗೂ ಕಾಮಾಕ್ಷಿಪಾಳ್ಯ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ₹3 ಲಕ್ಷ ಮೌಲ್ಯದ 9 ಬೈಕ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.