ಬುಧವಾರ, ಸೆಪ್ಟೆಂಬರ್ 30, 2020
23 °C

₹40 ಲಕ್ಷ ಬೆಲೆ ಬಾಳುವ ವಜ್ರದ ಹರಳು ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ₹40 ಲಕ್ಷ ಬೆಲೆಬಾಳುವ ವಜ್ರದ ಹರಳುಗಳನ್ನು ಅಕ್ರಮವಾಗಿ ಹೊಂದಿದ್ದ ಆರೋಪದಡಿ ಮೂವರು ಆರೋಪಿಗಳನ್ನು ಸಿಟಿ ಮಾರುಕಟ್ಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ರವಿಕುಮಾರ್ (54), ಪ್ರವೀಣ್ ಕುಮಾರ್ (51) ಹಾಗೂ ಸುಧೀರ್ (28) ಬಂಧಿತರು.

ಮಂಗಳವಾರ ರಾತ್ರಿ ಆರೋಪಿಗಳ ಚಲನವಲನಗಳನ್ನು ಆಧರಿಸಿ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ, ಅವರ ಬಳಿ ಮಹಿಳೆಯರು ಬಳಸುವ ಪರ್ಸ್ ಪತ್ತೆಯಾಗಿದೆ. ಅದರೊಳಗಿದ್ದ ನೀಲಿ ಬಣ್ಣದ ಪೇಪರ್‌ನಲ್ಲಿ 80 ಹರಳುಗಳು ಇದ್ದವು. ಸ್ಥಳಕ್ಕೆ ಆಭರಣ ತಯಾರಕರನ್ನು ಕರೆಸಿ, ಪರಿಶೀಲಿಸಿದಾಗ ಅವು ನಿಜವಾದ ವಜ್ರದ ಹರಳುಗಳು ಎಂಬುದು ಖಚಿತಗೊಂಡಿತು. ಆರೋಪಿಗಳ ಬಳಿ ಹರಳುಗಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಇರಲಿಲ್ಲ. ಹರಳುಗಳನ್ನು ಎಲ್ಲಿಂದಲೋ ಕದ್ದು, ಅಂಚೆಪೇಟೆಯ ಆಭರಣ ತಯಾರಿ ಅಂಗಡಿಗಳಿಗೆ ಮಾರಲು ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು