ಮಂಗಳವಾರ, ಜೂನ್ 22, 2021
22 °C
ಮಾಲೀಕನ ವಿರುದ್ಧ ತಂಡ ಕಟ್ಟಿದ್ದ ಆರೋಪಿ

ಪೊಲೀಸರ ಸೋಗಿನಲ್ಲಿ ಬೈಕ್‌ ಕಳ್ಳತನ: ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಾಲೀಕನಿಂದ ಹಣ ದೋಚುವುದಕ್ಕಾಗಿ ನಕಲಿ ಪೊಲೀಸರ ತಂಡ ರಚಿಸಿ, ಮಾಲೀಕನ ಬೈಕ್‌, ಎಟಿಎಂನಲ್ಲಿದ್ದ ಹಣ ಕಳವು ಮಾಡಿಸಿರುವ ನಾಲ್ಕು ಮಂದಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಬಸವೇಶ್ವರನಗರದ ನಿವಾಸಿ ಶರತ್ ಶೆಟ್ಟಿ (25), ಮೂಡಲಪಾಳ್ಯದ ಪೂರ್ವಿಕ್ ರಾಜ್ (21), ಚೋಳರ ಪಾಳ್ಯದ ಮೋಹನ್ ಕುಮಾರ್ (24), ಜಾಲಹಳ್ಳಿಯಲ್ಲಿ ವಾಸವಿದ್ದ ತಪಸ್ ರಾಯ್ (24) ಬಂಧಿತರು.

‘ಜಾಲಹಳ್ಳಿಯಲ್ಲಿ ವಾಸವಿದ್ದ ಪಶ್ಚಿಮ ಬಂಗಾಳದ ತಪನ್ ಬಿಸ್ವಾಸ್ ವಂಚನೆಗೆ ಒಳಗಾದ ವ್ಯಕ್ತಿ. ಬಂಧಿತ ತಪಸ್‌ ಇವರ ಬಳಿಯೇ ಕೆಲಸ ಮಾಡಿಕೊಂಡಿದ್ದು, ಈ ಕೃತ್ಯ ಎಸಗಿದ್ದಾನೆ. ಬಂಧಿತರಿಂದ ₹41 ಸಾವಿರ ನಗದು, ಒಂದು ಸ್ಕೂಟರ್ ಹಾಗೂ ಎರಡು ಬೈಕ್‌ ಜಪ್ತಿ ಮಾಡಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು