ಸೋಮವಾರ, 29 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಆರ್‌ಸಿಎಲ್ ವಿರುದ್ಧ ಕೆಪಿಟಿಸಿಎಲ್ ದೂರು

Last Updated 26 ಫೆಬ್ರವರಿ 2021, 21:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮಕ್ಕೆ (ಕೆಪಿಟಿಸಿಎಲ್‌) ಸೇರಿದ್ದ ಕೇಬಲ್‌ಗಳನ್ನು ಹಾನಿ ಮಾಡಲಾಗಿದೆ ಎಂದು ಆರೋಪಿಸಿ ಬಿಎಂಆರ್‌ಸಿಎಲ್‌ (ಮೆಟ್ರೊ), ಅಫ್ಕಾನ್ಸ್‌ ಹಾಗೂ ಚಾಮುಂಡೇಶ್ವರಿ ಎಂಟರ್‌ಪ್ರೈಸಸ್‌ ವಿರುದ್ಧಪೊಲೀಸರಿಗೆ ಕೆಪಿಟಿಸಿಎಲ್‌ ದೂರು ನೀಡಿದೆ.

‘ಬಿಎಂಆರ್‌ಸಿಎಲ್‌ ಸಂಸ್ಥೆಯು 11 ಕೆ.ವಿ ಸಾಮರ್ಥ್ಯದ ಕೇಬಲ್‌ ಅಳವಡಿಸಲು ನಿರ್ಮಾಣ ಸಂಸ್ಥೆಯಾಗಿರುವಅಫ್ಕಾನ್ಸ್‌ ಹಾಗೂಚಾಮುಂಡೇಶ್ವರಿ ಎಂಟರ್‌ಪ್ರೈಸಸ್‌ ಸಂಸ್ಥೆಗಳಿಗೆ ಗುತ್ತಿಗೆ ನೀಡಿತ್ತು. ನಿಮ್ಹಾನ್ಸ್‌ ಮುಖ್ಯದ್ವಾರದ ಬಳಿ ತಮ್ಮ ಕೇಬಲ್ ಅಳವಡಿಸುವ ವೇಳೆಕೆಪಿಟಿಸಿಎಲ್‌ಗೆ ಸೇರಿರುವ220 ಕೆ.ವಿ.ಸಾಮರ್ಥ್ಯದ ಕೇಬಲ್‌ಗಳಿಗೆ ಹಾನಿ ಮಾಡಿದ್ದಾರೆ. ಫೆ.16ರಂದು ಪರಿಶೀಲನೆ ವೇಳೆ ಈ ವಿಚಾರ ತಿಳಿಯಿತು. ಸಂಸ್ಥೆಗೆ ಅಂದಾಜು ₹1.4 ಕೋಟಿಯಷ್ಟು ನಷ್ಟ ಉಂಟಾಗಿದೆ’ ಎಂದು ಕೆಪಿಟಿಸಿಎಲ್‌ನ ಕಿರಿಯ ಎಂಜಿನಿಯರ್ ಕಿಶೋರ್ ದೂರಿನಲ್ಲಿ ತಿಳಿಸಿದ್ದಾರೆ.

220 ಕೆ.ವಿ.ಸಾಮರ್ಥ್ಯದ ಒಂದು ಮೀಟರ್‌ ಕೇಬಲ್‌ನ ಬೆಲೆ ಅಂದಾಜು ₹23,493. ಹಾನಿಯಾಗಿರುವ ಸ್ಥಳದಲ್ಲಿ ಸುಮಾರು 60 ಮೀಟರ್‌ಗಳಷ್ಟು ಕೇಬಲ್ ದುರಸ್ತಿ ಮಾಡಬೇಕಿದೆ. ಜಾಯಿಂಟ್ ಕಿಟ್‌ ಕೇಬಲ್‌ಗೆ ₹8.14 ಲಕ್ಷ ಹಾಗೂ ಅಳವಡಿಕೆಗೆ ₹57 ಲಕ್ಷ ಹಾಗೂ ಉಳಿದ ಖರ್ಚು ₹11 ಲಕ್ಷ ಆಗಬಹುದು ಎಂದು ಅಂದಾಜಿಸಲಾಗಿದೆ. ಸಿದ್ದಾಪುರ ಪೊಲೀಸರು ಪ್ರಕರಣ ಕೈಗೆತ್ತಿಕೊಂಡಿದ್ದಾರೆ.

‘ದೂರು ಸಂಬಂಧ ಎನ್‌ಸಿಆರ್‌ (ಗಂಭೀರವಲ್ಲದ ಅಪರಾಧ) ದಾಖಲಿಸಿಕೊಳ್ಳಲಾಗಿದೆ. ಕೋರ್ಟ್‌ನಿಂದ ಅನುಮತಿ ಪಡೆದ ನಂತರ ಎಫ್ಐಆರ್‌ ದಾಖಲಿಸಲಾಗುವುದು. ಸಂಬಂಧಿಸಿದ ಅಧಿಕಾರಿಗಳಿಗೆ ನೋಟಿಸ್‌ ನೀಡಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT