ಸೋಮವಾರ, ಜೂನ್ 21, 2021
29 °C

ಬಾಣಸಿಗರ ನಡುವೆ ಗಲಾಟೆ:ಕೊಲೆಯಲ್ಲಿ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಅಡುಗೆ ತಯಾರಿಸುವ ವಿಚಾರದಲ್ಲಿ ಬಾಣಸಿಗರಿಬ್ಬರ ನಡುವೆ ನಡೆದ ಜಗಳದಲ್ಲಿ ಒಬ್ಬ ಕೊಲೆಯಾಗಿರುವ ಘಟನೆ ಜೆ.ಪಿ.ನಗರ ಠಾಣಾ ವ್ಯಾಪ್ತಿಯ ವಾಲ್‌ಸ್ಟ್ರೀಟ್‌ ಪಬ್‌ನಲ್ಲಿ ನಡೆದಿದೆ.

ಪಶ್ಚಿಮ ಬಂಗಾಳದ ಸಾಗರ್ (22) ಮೃತಪಟ್ಟಿರುವ ಬಾಣಸಿಗ. ಮೌಸಿಕ್ ಚಾಕುವಿನಿಂದ ಇರಿದು ಪರಾರಿಯಾಗಿರುವ ಆರೋಪಿ.

‘ಸಾಗರ್ ಹಾಗೂ ಮೌಸಿಕ್ ಪಬ್‌ನಲ್ಲಿ ಶೆಫ್‌ಗಳಾಗಿ (ಬಾಣಸಿಗ) ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಅಡುಗೆ ಮಾಡುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು’.

‘ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಮೌಸಿಕ್ ಮೇಲೆ ಸಾಗರ್‌ ಗಲಾಟೆ ಮಾಡಿದ್ದ. ಈ ವೇಳೆ ಕೋಪಗೊಂಡಿದ್ದ ಮೌಸಿಕ್‌, ಚಾಕುವಿನಿಂದ ಸಾಗರ್‌ ಅವರ ಹೊಟ್ಟೆ ಮತ್ತು ಎದೆಯ ಭಾಗಕ್ಕೆ ಇರಿದಿದ್ದ.‌ಗಾಯಗೊಂಡಿದ್ದ ಸಾಗರ್‌ ಅವರನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟರು’ ಎಂದು ಮೂಲಗಳು ತಿಳಿಸಿವೆ.

ಘಟನೆ ನಂತರ ಮೌಸಿಕ್ ಅಲ್ಲಿಂದ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಸಂಬಂಧ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು