ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

78 ವಾಹನ ಜಪ್ತಿ: ಆರೋಪಿಗಳ ಬಂಧನ

Last Updated 15 ಜುಲೈ 2021, 5:48 IST
ಅಕ್ಷರ ಗಾತ್ರ

ಬೆಂಗಳೂರು: ಪೂರ್ವ ವಿಭಾಗದ ಪೊಲೀಸರು ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಕಳವಾಗಿದ್ದ 20 ಕಾರುಗಳು ಹಾಗೂ 58 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದು, ಹಲವರನ್ನು ಬಂಧಿಸಿದ್ದಾರೆ.

20 ಕಾರುಗಳು ಜಪ್ತಿ: ಕಾರುಗಳನ್ನು ಕಳವು ಮಾಡಿ ಮಾರಾಟ ಮಾಡುತ್ತಿದ್ದ ಶಬ್ಬೀರ್ ಎಂಬ ಆರೋಪಿಯನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.

’ಎಟಿಎಂಗೆ ತುಂಬಲು ಬಂದಿದ್ದ ಹಣದೊಂದಿಗೆ ಪರಾರಿಯಾಗಿದ್ದ ಪ್ರಕರಣದಲ್ಲಿ ಕೃತ್ಯಕ್ಕೆ ಬಳಕೆಯಾಗಿದ್ದ ವಾಹನ ಪತ್ತೆಯಾಗಿತ್ತು. ಅದರಲ್ಲಿದ್ದ ಶಬ್ಬೀರ್‌ನನ್ನು ವಿಚಾರಣೆ ನಡೆಸಿದಾಗ, ಸ್ನೇಹಿತರೊಂದಿಗೆ ಸೇರಿ ಕಾರು ಕದ್ದು ಮಾರುತ್ತಿದ್ದ ವಿಚಾರ ತಿಳಿಸಿದ. ಈತನಿಂದ ವಿವಿಧ ಮಾದರಿಯ 20 ಕಾರುಗಳನ್ನು ಜಪ್ತಿ ಮಾಡಲಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ’ ಎಂದು ಪೊಲೀಸರು ತಿಳಿಸಿದರು.

ನಕಲಿ ಬೀಗ ಬಳಸಿ ಕಳ್ಳತನ: ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ನಕಲಿ ಬೀಗ ಉಪಯೋಗಿಸಿ ಕದ್ದು ಮಾರಾಟ ಮಾಡುತ್ತಿದ್ದ ದಿಲೀಪ್, ರಂಗನಾಥ್, ಸಾಹಿಲ್, ಮಕ್ಸೂದ್, ಸೈಯದ್ ಜಬೀ, ಅಹಮದ್ ಖಾನ್, ಸೈಯದ್ ಅಸ್ಲಂ ಎಂಬುಬರನ್ನು ಬಾಣಸವಾಡಿ ಪೊಲೀಸರು ಬಂಧಿಸಿ, 28 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಿದ್ದಾರೆ.

‘ಹಲಸೂರು ಹಾಗೂ ಪುಲಿಕೇಶಿ ನಗರ ಪೊಲೀಸರು ತಲಾ 11 ದ್ವಿಚಕ್ರ ವಾಹನ, ಜೆ.ಪಿ.ನಗರ ಐದು ಹಾಗೂ ರಾಮಮೂರ್ತಿ ನಗರ ಪೊಲೀಸರು ಮೂರು ದ್ವಿಚಕ್ರ ವಾಹನ ಜಪ್ತಿ ಮಾಡಿದ್ದಾರೆ. ಒಟ್ಟು ಪ್ರಕರಣಗಳಲ್ಲಿ 16 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT