‘ಅಣ್ಣನ ನೆನಪು’ ಸಾಕ್ಷ್ಯ ನಾಟಕ ಪ್ರದರ್ಶನ

ಬೆಂಗಳೂರು: ಪ್ರವರ ಥಿಯೇಟರ್ ನ.1ರಂದು ಸಂಜೆ 7 ಗಂಟೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯದಲ್ಲಿ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ ಪ್ರದರ್ಶನ ಹಮ್ಮಿಕೊಂಡಿದೆ.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಈ ನಾಟಕವನ್ನು ಹನು ರಾಮಸಂಜೀವ್ ನಿರ್ದೇಶಿಸಿದ್ದಾರೆ. ಮಾಹಿತಿಗೆ 9686869676 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

‘ಸೀತಾ ಪರಿತ್ಯಾಗ’ ತಾಳ ಮದ್ದಳೆ

ಬೆಂಗಳೂರು: ನಾಗರಬಾವಿಯಲ್ಲಿರುವ ಕರ್ನಾಟಕದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕೆಆರ್ಇಡಿಎಲ್) ಸಭಾಂಗಣದಲ್ಲಿ ನ.2ರಂದು ಮಧ್ಯಾಹ್ನ 3 ಗಂಟೆಗೆ ‘ಸೀತಾ ಪರಿತ್ಯಾಗ’ ತಾಳ ಮದ್ದಳೆ ಹಮ್ಮಿಕೊಳ್ಳಲಾಗಿದೆ.

ಈ ತಾಳ ಮದ್ದಳೆಯನ್ನು ಜಗದೀಶ್ ಹೊಸಬಾಳೆ ಹಾಗೂ ವಿನಾಯಕ ವಾಜಗದ್ದೆ ಸಂಯೋಜಿಸಿದ್ದಾರೆ. ಹಿಮ್ಮೇಳದಲ್ಲಿ ಕೇಶವ ಹೆಗಡೆ ಕೊಳಗಿ (ಭಾಗವತಿಕೆ), ಎ.ಪಿ. ಘಾಟಕ್ (ಮದ್ದಳೆ) ಪಾಲ್ಗೊಳ್ಳಲಿದ್ದಾರೆ. ಮುಮ್ಮೇಳದಲ್ಲಿ ಸರ್ಪಂಗಳ ಈಶ್ವರ ಭಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗಾ ಭಟ್, ವಿ. ಗಣಪತಿ ಭಟ್ ಭಾಗವಹಿಸಲಿದ್ದಾರೆ. ಟಿಕೆಟ್ಗಳು ಬುಕ್ ಮೈ ಶೊದಲ್ಲಿ ಲಭ್ಯ.

ಕಾರ್ತಿಕ ಸಂಗೀತ ಸಂಭ್ರಮ

ಬೆಂಗಳೂರು: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ನ.5ರಿಂದ ನ.9ರವರೆಗೆ ಶ್ರೀರಾಮ ಮಂದಿರದಲ್ಲಿ ಕಾರ್ತಿಕ ಸಂಗೀತ ಸಂಭ್ರಮ, ಕನಕದಾಸರ ಜಯಂತಿ, ಕರ್ನಾಟಕ ರಾಜ್ಯೋತ್ಸವ, ಹರಿದಾಸ ಸಂಭ್ರಮ ಮತ್ತು ಅನ್ನಮಾಚಾರ್ಯರ ಸಂಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಪ್ರತಿನಿತ್ಯ ಸಂಜೆ ಸಂಗೀತ ಕಾರ್ಯಕ್ರಮ ನಡೆಯಲಿವೆ. 5ರಂದು ಸಂಜೆ 6 ಗಂಟೆಗೆ ಶಾಸ್ತ್ರೀಯ, ಭಾವಗೀತೆ ಹಾಗೂ ಚಿತ್ರಗೀತೆಗಳ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಸ್. ಶಂಕರ್ ಅವರು ಗಾಯನ ಪ್ರಸ್ತುತಪಡಿಸಲಿದ್ದಾರೆ. ನ.6ರಿಂದ ನ.8ರವರೆಗೂ ಪ್ರತಿ ದಿನ ಸಂಜೆ 6 ಗಂಟೆಗೆ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನ.9ರಂದು ಸಂಜೆ 5 ಗಂಟೆಯಿಂದ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ಅವರು ಹರಿದಾಸ ರೂಪಕವನ್ನು ನಿರೂಪಿಸಲಿದ್ದಾರೆ. ಬಳಿಕ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಸಾಹಿತ್ಯ–ಸಂಸ್ಕೃತಿ ಉತ್ಸವ

ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯವು ನ.1ರಿಂದ ಡಿ.7ರವರೆಗೆ ಕೆಂಪೇಗೌಡನಗರದ ರಾಷ್ಟ್ರೋತ್ಥಾನ ಪರಿಷತ್ತಿನಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ಸಾಹಿತ್ಯ–ಸಂಸ್ಕೃತಿ ಉತ್ಸವ ಹಮ್ಮಿಕೊಂಡಿದೆ.

1ರಂದು ಸಂಜೆ 6 ಗಂಟೆಗೆ ಆನೂರು ಅನಂತಕೃಷ್ಣ ಶರ್ಮ ಅವರ ನಿರ್ದೇಶನದಲ್ಲಿ ‘ಲಯಲಾವಣ್ಯ’ ತಾಳವಾದ್ಯಗೋಷ್ಠಿ ನಡೆಯಲಿದೆ. 2ರಂದು ಬೆಳಿಗ್ಗೆ 10.30ರಿಂದ ಎಚ್.ಎಸ್. ವೇಣುಗೋಪಾಲ್ ಅವರ ನಿರ್ದೇಶನದಲ್ಲಿ ‘ಗೋಕುಲೋತ್ಸವ’ ಕೊಳಲು ವಾದನ ಹಮ್ಮಿಕೊಳ್ಳಲಾಗಿದೆ. 3ರಂದು ಸಂಜೆ 6 ಗಂಟೆಯಿಂದ ಪದ್ಮಿನಿ ಓಕ್ ಮತ್ತು ತಂಡದಿಂದ ‘ಸಂಘ ಶತಾಬ್ಧ’ ನಾದನೈವೇದ್ಯ ಕಾರ್ಯಕ್ರಮ ನಡೆಯಲಿದೆ.

4ರಂದು ಸಂಜೆ 6 ಗಂಟೆಯಿಂದ ದಕ್ಷಿಣಾಮೂರ್ತಿ ಮತ್ತು ತಂಡದಿಂದ ನಾದಸ್ವರಗೋಷ್ಠಿ, 5ರಂದು ಸಂಜೆ 6 ಗಂಟೆಯಿಂದ ಬಿ.ವಿ. ರಾಜಾರಾಂ ನಿರ್ದೇಶನದಲ್ಲಿ ಕಲಾಗಂಗೋತ್ರಿ ತಂಡದಿಂದ ‘ಮೈಸೂರು ಮಲ್ಲಿಗೆ’ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. 37 ದಿನಗಳ ಉತ್ಸವ ಇದಾಗಿದೆ

ಪ್ರತಿ ಗುರುವಾರ ಪ್ರಕಟವಾಗುವ ‘ಸಾಂಸ್ಕೃತಿಕ ಮುನ್ನೋಟ’ ಅಂಕಣದಲ್ಲಿ ಪ್ರಕಟಿಸಲು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ವಿವರಗಳನ್ನು ಈ ಕೆಳಗಿನ ಇ–ಮೇಲ್ಗೆ (ಬುಧವಾರ ಸಂಜೆ 6 ಗಂಟೆ ಒಳಗೆ) ಕಳುಹಿಸಿ nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.