ಬುಧವಾರ, ಆಗಸ್ಟ್ 4, 2021
26 °C

ಮೊಬೈಲ್ ಟವರ್ ಹೆಸರಿನಲ್ಲಿ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆ ಮೇಲೆ ಮೊಬೈಲ್ ಟಾವರ್ ನಿರ್ಮಿಸುವ ನೆಪದಲ್ಲಿ ಸೈಬರ್ ವಂಚಕರಿಬ್ಬರು, ನಗರದ ನಿವಾಸಿ ಸೋಮಶೇಖರ್ ಎಂಬುವರಿಂದ ₹26 ಸಾವಿರ ಪಡೆದು ವಂಚಿಸಿದ್ದಾರೆ.

ಈ ಸಂಬಂಧ ಆಗ್ನೇಯ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆ ಸಂಬಂಧ ಸೋಮಶೇಖರ್ ನೀಡಿರುವ ದೂರು ಆಧರಿಸಿ ವಿಷ್ಣು ಶೆಟ್ಟಿ ಮತ್ತು ಅರ್ಜುನ್ ಗೌಡ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ‍ಪೊಲೀಸರು ಹೇಳಿದರು.

‘ಪ್ರತಿಷ್ಠಿತ ಮೊಬೈಲ್ ಸೇವಾ ಕಂಪನಿ ಹೆಸರು ಹೇಳಿದ್ದ ಆರೋಪಿಗಳು, ‘ಟಾವರ್ ನಿರ್ಮಿಸಲು ಜಾಗ ಕೊಟ್ಟರೆ ₹ 60 ಲಕ್ಷ ಠೇವಣಿ ಇರಿಸುತ್ತೇವೆ. ಮಾಸಿಕ ₹ 50 ಸಾವಿರ ಬಾಡಿಗೆ ಪಾವತಿಸುತ್ತೇವೆ’ ಎಂದಿದ್ದರು. ಅದಕ್ಕೆ ಸೋಮಶೇಖರ್ ಒಪ್ಪಿದ್ದರು. ನಂತರ, ನೋಂದಣಿ ಶುಲ್ಕವೆಂದು ಹೇಳಿ ₹26 ಸಾವಿರ ಪಡೆದು ಆರೋಪಿಗಳು ವಂಚಿಸಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು