ಮಂಗಳವಾರ, ನವೆಂಬರ್ 24, 2020
27 °C

ವೈದ್ಯೆ ಸೋಗಿನಲ್ಲಿ ₹ 2 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಮಾಜಿಕ ಜಾಲತಾಣ ಮೂಲಕ ವೈದ್ಯೆ ಸೋಗಿನಲ್ಲಿ ನಗರದ ನಿವಾಸಿ ಸೂರ್ಯಕಾಂತ್ ಎಂಬುವರನ್ನು ಪರಿಚಯಿಸಿಕೊಂಡಿದ್ದ ಮಹಿಳೆ, ಉಡುಗೊರೆ ಕಳುಹಿಸುವುದಾಗಿ ಹೇಳಿ ₹ 2 ಲಕ್ಷ ಪಡೆದು ವಂಚಿಸಿದ್ದಾರೆ.

ವಂಚನೆಗೀಡಾಗಿರುವ ಸೂರ್ಯಕಾಂತ್ ದಕ್ಷಿಣ ವಿಭಾಗ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

‘ಖಾಸಗಿ ಕಂಪನಿ ಉದ್ಯೋಗಿ ಸೂರ್ಯಕಾಂತ್ ಅವರಿಗೆ ಕೆಲ ದಿನಗಳ ಹಿಂದಷ್ಟೇ ಪ್ರಿಸ್ಟಿಲ್ಲಾ ಎಂಬ ಮಹಿಳೆ ಪರಿಚಯ ಆಗಿತ್ತು. ತಾವು ಇಂಗ್ಲೆಂಡ್‌ನಲ್ಲಿ ವೈದ್ಯ ಆಗಿರುವುದಾಗಿ ಮಹಿಳೆ ಹೇಳಿದ್ದರು. ಬಡವರಿಗೆ ಕೊರೊನಾ ಸೋಂಕು ಚಿಕಿತ್ಸೆಯನ್ನು ಉಚಿತವಾಗಿ ನೀಡಲು ಬೆಂಗಳೂರಿಗೆ ಬರುವುದಾಗಿಯೂ ತಿಳಿಸಿದ್ದರು. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸರು ಹೇಳಿದರು.

‘ನ. 11ರಂದು ಸೂರ್ಯಕಾಂತ್ ಅವರಿಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ‘ನಿಮ್ಮ ಸ್ನೇಹಿತ ಪ್ರಿಸ್ಟಿಲ್ಲಾ ಇಂಗ್ಲೆಂಡ್‌ನಿಂದ ಬಂದಿದ್ದಾರೆ. ₹ 3 ಕೋಟಿ ಮೌಲ್ಯದ ವಸ್ತುಗಳ ಜೊತೆ ಸಿಕ್ಕಿಬಿದ್ದಿದ್ದಾರೆ. ತೆರಿಗೆ ಪಾವತಿಸಿದರೆ ಬಿಟ್ಟು ಕಳುಹಿಸುತ್ತೇನೆ’ ಎಂದಿದ್ದ. ಅದನ್ನು ನಂಬಿದ್ದ ದೂರು
ದಾರ, ₹ 2 ಲಕ್ಷ ಸಂದಾಯ ಮಾಡಿದ್ದರು. ಅದಾದ ಬಳಿಕ ಮಹಿಳೆ ಸಂಪರ್ಕಕ್ಕೆ ಸಿಕ್ಕಿಲ್ಲ’ ಎಂದೂ ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು