ಶುಕ್ರವಾರ, ಫೆಬ್ರವರಿ 21, 2020
18 °C

₹ 1 ಲಕ್ಷ ಲಪಟಾಯಿಸಿದ ಸೈಬರ್‌ ಖದೀಮರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೇಟಿಎಂ ಮಾಲ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡು ಕರೆ ಮಾಡಿ, ‘ಲಕ್ಕಿ ಪೇಟಿಎಂ’ ಬಳಸಿದರೆ ಬಗೆಬಗೆಯ ಉಡುಗೊರೆಗಳು ಲಭ್ಯವಿದೆ ಎಂದು ನಂಬಿಸಿ ಸೈಬರ್‌ ಖದೀಮರು, ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರ ಬ್ಯಾಂಕ್ ಖಾತೆಯಿಂದ ₹1 ಲಕ್ಷ ಲಪಟಾಯಿಸಿದ್ದಾರೆ.

ಬನ್ನೇರುಘಟ್ಟ ರಸ್ತೆಯ ನಿವಾಸಿ ನಿಖಿಲ್ ಲಂಬೋದರ್ ನಾಯಕ್ ಹಣ ಕಳೆದುಕೊಂಡವರು. ಈ ಬಗ್ಗೆ ಅವರು ವರ್ತೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅಪರಿಚಿತ ನಂಬರ್‍ ಒಂದರಿಂದ ಫೆ. 8ರಂದು ನಿಖಿಲ್‍ ಅವರಿಗೆ ಕರೆ ಬಂದಿತ್ತು. ಅದನ್ನು ಸ್ವೀಕರಿಸಿದಾಗ, ಪೇಟಿಎಂ ಮಾಲ್ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ‘ಲಕ್ಕಿ ಪೇಟಿಎಂ’ ಬಳಸಿದರೆ ವಿವಿಧ ಉಡುಗೊರೆಗಳು ಸಿಗುತ್ತವೆ. ಅದಕ್ಕೆ ನೀವು ನಮ್ಮ ಕಂಪನಿಯಲ್ಲಿ ₹5 ಸಾವಿರ ಮೊತ್ತದ ವ್ಯವಹಾರ ನಡೆಸಬೇಕಾಗುತ್ತದೆ. ನೀವು ಪೇಟಿಎಂ ಆ್ಯಪ್‍ನ್ನು ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಿ’ ಎಂದು ಲಿಂಕ್ ಕಳುಹಿಸಿದ್ದ. ಆತನ ಮಾತು ನಂಬಿದ ನಿಖಿಲ್, ಲಿಂಕ್ ಮೂಲಕ ಪೇಟಿಎಂ ಆ್ಯಪ್‍ನಲ್ಲಿ ಬ್ಯಾಂಕ್ ಖಾತೆಯ ಯುಪಿಐ ವರ್ಗಾವಣೆ ಮತ್ತು ಐಎಫ್‍ಎಸ್‍ಸಿ ಕೋಡ್‍ ದಾಖಲಿಸಿದ್ದರು.

ಆದರೆ, ಕೆಲವೇ ಸಮಯದ ಬಳಿಕ ಅನುಮಾನದಿಂದ ನಿಖಿಲ್‌ ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಅವರ ಖಾತೆಯನ್ನು ಹ್ಯಾಕ್ ಮಾಡಿ ₹1 ಲಕ್ಷ ಹಣವನ್ನು ಬೇರೆ ಖಾತೆಗೆ ವರ್ಗಾಯಿಸಿರುವುದು ಗೊತ್ತಾಗಿದೆ. ಈ ಬಗ್ಗೆ ದೂರಿನಲ್ಲಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು