ಬೆಂಗಳೂರು: ‘₹48 ಪಾವತಿಸಿ 48 ಮೊಟ್ಟೆ ಖರೀದಿಸಿ’ ಎಂಬುದಾಗಿ ಇ–ಮೇಲ್ ಮೂಲಕ ಬಂದಿದ್ದ ಸಂದೇಶ ನಂಬಿ ಮಹಿಳೆಯೊಬ್ಬರು ₹ 48 ಸಾವಿರ ಕಳೆದುಕೊಂಡಿದ್ದು, ಈ ಸಂಬಂಧ ಹೈಗ್ರೌಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಸಂತನಗರದ ಮಹಿಳೆಯೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಮಹಿಳೆಯ ಇ–ಮೇಲ್‌ಗೆ ಫೆ.17ರಂದು ಸಂದೇಶ ಬಂದಿತ್ತು. ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದ ಮಹಿಳೆ, ವಿಳಾಸ ಹಾಗೂ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಿದ್ದರು. ನಂತರ, ಆನ್‌ಲೈನ್ ಮೂಲಕ ₹ 48 ಪಾವತಿಸಿದ್ದರು. ಇದಾದ ಕೆಲ ನಿಮಿಷಗಳಲ್ಲಿ ಮಹಿಳೆಯ ಖಾತೆಯಿಂದ ₹ 48 ಸಾವಿರ ಕಡಿತವಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಇ– ಕಾಮರ್ಸ್ ಜಾಲತಾಣವೊಂದರ ಹೆಸರಿನಲ್ಲಿ ಸಂದೇಶ ಕಳುಹಿಸಿ ಹಣ ದೋಚಲಾಗಿದೆ. ಆಮಿಷವೊಡ್ಡಿ ಹಣ ದೋಚುವ ಜಾಲದ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು’ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.