ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಸರಹಳ್ಳಿ ವಲಯ: ರಸ್ತೆ ಗುಂಡಿ ಮುಚ್ಚಲು ಸಾರ್ವಜನಿಕರ ಆಗ್ರಹ

Published : 29 ಸೆಪ್ಟೆಂಬರ್ 2024, 23:31 IST
Last Updated : 29 ಸೆಪ್ಟೆಂಬರ್ 2024, 23:31 IST
ಫಾಲೋ ಮಾಡಿ
Comments

ಪೀಣ್ಯ ದಾಸರಹಳ್ಳಿ: ಬಿಬಿಎಂಪಿ ದಾಸರಹಳ್ಳಿ ವಲಯದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಇಲ್ಲಿನ ವಾರ್ಡ್‌ ಗಳ ರಸ್ತೆಗಳಲ್ಲಿ ಗುಂಡಿಗಳಿಗಿಂತ ಹೆಚ್ಚಾಗಿ, ಬೇರೆ ಕಾಮಗಾರಿಗಳಿಗಾಗಿ ರಸ್ತೆ ಅಗೆದು ಹಾಗೇ ಬಿಟ್ಟಿರುವುದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.‌

ಒಳಚರಂಡಿ ಕಾಮಗಾರಿ, ಕುಡಿಯುವ ನೀರು ಪೂರೈಕೆ ಪೈಪ್‌ಗಳ ಅಳವಡಿಕೆ, ವಿದ್ಯುತ್ ಕೇಬಲ್‌ ಅಳವಡಿಕೆ ಹೀಗೆ ಭಿನ್ನ ಕಾರಣಗಳಿಗೆ ರಸ್ತೆಗಳನ್ನು ಅಗೆಯಲಾಗಿದೆ. ಹಾಗೆಯೇ ಬಿಡಲಾಗಿದೆ. ಈ ರಸ್ತೆಗಳಲ್ಲಿನ ಸಮಸ್ಯೆ, ಬಿಬಿಎಂಪಿಯ ಹಳೆಯ ವಾರ್ಡ್‌ಗಳಿಗಿಂತ, 110 ಹಳ್ಳಿಗೆ ಸೇರಿದ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣುತ್ತದೆ.

‘ರಾಜಗೋಪಾಲ ಬಡಾವಣೆಯ ಎಲ್ಲಾ ಕಡೆಗಳಲ್ಲೂ ಅಡ್ಡರಸ್ತೆಗಳು ಹಾಳಾಗಿವೆ. ಈಗ ಬಿಬಿಎಂಪಿ ಸಿಬ್ಬಂದಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ.‌ ಕೆಲವೆಡೆ ಹಾಗೆ ಇದ್ದು, ಸಮರ್ಪಕವಾಗಿ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಬೇಕು ಎಂದು’ ಎಂದು ನಿವಾಸಿ ಕುಮಾರ್ ಆಗ್ರಹಿಸಿದ್ದಾರೆ.

‘ಈಗ ನಮ್ಮ ಭಾಗದಲ್ಲಿ ಡಾಂಬರೀಕರಣ ಆಗಿದೆ. ಚಿಕ್ಕಸಂದ್ರ, ಶೆಟ್ಟಿಹಳ್ಳಿ, ಗೆಳೆಯರ ಬಳಗ ಬಡಾವಣೆಗಳಲ್ಲಿ ಕಾವೇರಿ ನೀರಿನ ಸಂಪರ್ಕ ಹಾಗೂ ಒಳಚರಂಡಿ ಕಾಮಗಾರಿಗಾಗಿ ಅಗೆದಿದ್ದ ರಸ್ತೆಗಳನ್ನು ಹಾಗೇ ಬಿಟ್ಟಿದ್ದಾರೆ. ಅದನ್ನು ತಕ್ಷಣವೇ ಮುಚ್ಚಿ ಸರಿಪಡಿಸಬೇಕು’ ಎಂದು ಚಿಕ್ಕಸಂದ್ರ ನಿವಾಸಿ ಕಿರಣ್ ಒತ್ತಾಯಿಸಿದರು.

‘ದಾಸರಹಳ್ಳಿ ವಲಯದ ಕೆಲವು ಬಡಾವಣೆ
ಗಳಲ್ಲಿ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ಮುಗಿದಿದೆ. ಉಳಿದಿರುವ ಬಡಾವಣೆಗಳಲ್ಲೂ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತದೆ’
ಎಂದು ಬಿಬಿಎಂಪಿ ವಲಯ ಸಹಾಯಕ ಎಂಜಿನಿ
ಯರ್ ವೆಂಕಟೇಶ್ ಅವರು ಪ್ರತಿಕ್ರಿಯಿಸಿದರು.

‘ಅನುದಾನ ಅಗತ್ಯ’
‘ದಾಸರಹಳ್ಳಿ ವಲಯದ ಎಲ್ಲಾ ವಾರ್ಡ್‌ಗಳಲ್ಲೂ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಕೆಲ ಅಡ್ಡ ರಸ್ತೆಗಳಲ್ಲಿ ರೋಡ್ ಕಟ್ಟಿಂಗ್‌ ಮಾಡಿದ್ದು, ರಸ್ತೆ ಹಾಳಾಗಿದೆ. ಅಂತಹ ಕಡೆಗಳಲ್ಲಿ ಡಾಂಬರೀಕರಣ ಮಾಡಬೇಕು. ಈಗಿರುವ ಅನುದಾನ ಸಾಕಾಗುತ್ತಿಲ್ಲ' ಎಂದು ದಾಸರಹಳ್ಳಿ ವಲಯ ಬಿಬಿಎಂಪಿ ಮುಖ್ಯ ಎಂಜಿನಿಯರ್ ರವಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT