ಮಾನಸಿಕ ಕಿರುಕುಳ ಆರೋಪ: ಡಿಸಿಪಿ ನಿಶಾ ಜೇಮ್ಸ್ ವರ್ಗಾವಣೆ

ಬೆಂಗಳೂರು: ‘ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿಯ ಡಿಸಿಪಿ (ಡಿಸಿಪಿ) ನಿಶಾ ಜೇಮ್ಸ್ ಅವರು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಸಿಬ್ಬಂದಿ ದೂರು ನೀಡಿದ್ದ ಬೆನ್ನಲ್ಲೇ ನಿಶಾ ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ವರ್ಗಾವಣೆ ಮಾಡಲಾಗಿದೆ.
ನಿಶಾ ಅವರ ಜಾಗಕ್ಕೆ ಬಿ.ಎಂ. ಲಕ್ಷ್ಮಿಪ್ರಸಾದ್ ಅವರನ್ನು ವರ್ಗಾಯಿಸಿ ಎಡಿಜಿಪಿ (ಪೊಲೀಸ್ ಆಡಳಿತ) ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ.
‘ವಾರ್ಷಿಕ ವೇತನ ಬಡ್ತಿ ತಡೆ ಹಿಡಿದಿರುವ ನಿಶಾ ಜೇಮ್ಸ್, ಭವಿಷ್ಯದ ಜತೆಗೆ ಚೆಲ್ಲಾಟ ಆಡುತ್ತಿದ್ದಾರೆ. ತಮ್ಮ ತಪ್ಪನ್ನು ಸಿಬ್ಬಂದಿ ಮೇಲೆ ಹೊರಿಸಿ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಸಣ್ಣ ಸಮಸ್ಯೆಗಳನ್ನೇ ದೊಡ್ಡದಾಗಿ ಬಿಂಬಿಸಿ ಕೆಲಸವನ್ನು ವರ್ಷಗಟ್ಟಲೇ ಎಳೆಯುತ್ತಿದ್ದಾರೆ. ಕಡತಗಳು ವಿಲೇವಾರಿ ಸಹ ವಿಳಂಬವಾಗುತ್ತಿದೆ’ ಎಂದು ಆರೋಪಿಸಿದ್ದ ಸಿಬ್ಬಂದಿ, ಎಡಿಜಿಪಿ ಎಂ.ಎ. ಸಲೀಂ ಅವರಿಗೆ 13 ಪುಟಗಳ ಪತ್ರ ಬರೆದಿದ್ದರು.
ಪತ್ರದ ಬಗ್ಗೆ ವರದಿ ಪಡೆದ ರಾಜ್ಯ ಸರ್ಕಾರ, ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಅದರನ್ವಯ ನಿಶಾ ಅವರನ್ನು ವರ್ಗಾವಣೆಗೊಳಿಸಿ ಎಡಿಜಿಪಿ ಸಲೀಂ ಆದೇಶ ಹೊರಡಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.