ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಸ್‌ ಅಧಿಕಾರಿಗೆ ಬೆದರಿಕೆ; ಎಫ್ಐಆರ್‌ ದಾಖಲು

Published 6 ಜನವರಿ 2024, 16:25 IST
Last Updated 6 ಜನವರಿ 2024, 16:25 IST
ಅಕ್ಷರ ಗಾತ್ರ

ಬೆಂಗಳೂರು: ಬೈಕ್‌ ಸವಾರನೊಬ್ಬ, ಐಪಿಎಸ್‌ ಅಧಿಕಾರಿ ಶೋಭಾರಾಣಿ ಅವರಿಗೆ ನಿಂದಿಸಿ ಬೆದರಿಕೆ ಹಾಕಿದ್ದು ಆರ್‌ಎಂಸಿ ಯಾರ್ಡ್‌ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಸಪ್ತಗಿರಿ ಲೇಔಟ್‌ನ ಜಿ.ಅಭಿಷೇಕ್‌ ವಿರುದ್ಧ ದೂರು ದಾಖಲಾಗಿದೆ. ‌ಬಿಬಿಎಂಪಿ ಕೇಂದ್ರ ಕಚೇರಿಯ ಬೆಂಗಳೂರು ಮಹಾನಗರ ಕಾರ್ಯಪಡೆಯಲ್ಲಿ ಎಸ್‌ಪಿಯಾಗಿ ಶೋಭಾರಾಣಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಜ.3ರಂದು ಸರ್ಕಾರಿ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದೆ. ಗೊರಗುಂಟೆಪಾಳ್ಯ ಸಿಗ್ನಲ್‌ ಬಳಿ ಹಿಂಬದಿಯಿಂದ ಬಂದ್‌ ಬೈಕ್‌, ಕಾರಿಗೆ ಡಿಕ್ಕಿಯಾಗಿತ್ತು. ನಂತರ ಕಾರು ನಿಲ್ಲಿಸಿ ಚಾಲಕ ಸವಾರನನ್ನು ಪ್ರಶ್ನಿಸುತ್ತಿದ್ದರು. ಕಾರು ಚಾಲಕನಿಗೆ ಆರೋಪಿ ನಿಂದಿಸಿದ. ಅದನ್ನು ಕಂಡು ಕಾರಿನಿಂದ ಇಳಿದು ಪ್ರಶ್ನಿಸಿದ್ದಕ್ಕೆ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ. ಬೈಕ್‌ ಸವಾರನ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿ ಶೋಭಾರಾಣಿ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT