ಭಾನುವಾರ, ಅಕ್ಟೋಬರ್ 24, 2021
21 °C

‘ವಿಶ್ವ ಧಾರ್ಮಿಕ ಸಂಸತ್‌’ನಲ್ಲಿ ದೀಪ್ತಿ ನವರತ್ನ ಸಂಗೀತ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಷಿಕಾಗೊದಲ್ಲಿ ನಡೆಯಲಿರುವ ‘ವಿಶ್ವ ಧಾರ್ಮಿಕ ಸಂಸತ್‌’ ಸಮ್ಮೇಳನದಲ್ಲಿ ನಗರದ ಗಾಯಕಿ ಡಾ. ದೀಪ್ತಿ ನವರತ್ನ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.

ಈ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಲಿರುವ ಭಾರತದ ಮೊಟ್ಟ ಮೊದಲ ಸಂಗೀತಗಾರ್ತಿ ಇವರಾಗಿದ್ದಾರೆ.

ಕೇಂದ್ರ ಸರ್ಕಾರದ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಪ್ರಾದೇಶಿಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸಿರುವ ಡಾ. ದೀಪ್ತಿ ಅವರನ್ನು, ಅಕ್ಟೋಬರ್‌ 18ರಂದು ನಡೆಯಲಿರುವ ‘ವಿಶ್ವ ಧಾರ್ಮಿಕ ಸಂಸತ್‌’ ಸಮ್ಮೇಳನದಲ್ಲಿ ‘ದಿ ಡೈಲಾಗ್ಸ್‌ ವಿತ್‌ ದಿ ಡಿವೈನ್‌’ ಸಂಗೀತ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸಲು ಆಹ್ವಾನಿಸಲಾಗಿದೆ.

ಕೋವಿಡ್ ಸಾಂಕ್ರಾಮಿಕ ಪಿಡುಗಿನ ಕಾರಣ, ಡಾ. ದೀಪ್ತಿ ನವರತ್ನ ಮತ್ತು ಇತರ ಕಲಾವಿದರು ತಮ್ಮ ಕಾರ್ಯಕ್ರಮವನ್ನು ಬೆಂಗಳೂರಿನಿಂದಲೇ ಪ್ರಸ್ತುತಪಡಿಸಲಿದ್ದಾರೆ.(ಲಿಂಕ್: https://www.youtube.com/watch?v=fzpny-s1pt4)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು