ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | 40 ಐಟಿ ಪಾರ್ಕ್‌ಗಳಿಂದ ‘ಝೀರೊ ಬ್ಯಾಕ್ಟೀರಿಯಲ್‌’ ನೀರಿಗೆ ಬೇಡಿಕೆ

Published 2 ಮೇ 2024, 15:50 IST
Last Updated 2 ಮೇ 2024, 15:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿರುವ 40 ಐಟಿ ಪಾರ್ಕ್‌ಗಳಿಂದ ‘ಝೀರೊ ಬ್ಯಾಕ್ಟೀರಿಯಲ್‌’ ನೀರಿಗೆ ಬೇಡಿಕೆ ಬಂದಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್‌ ಮನೋಹರ್‌ ತಿಳಿಸಿದರು.

ಐಐಎಸ್‌ಸಿ ವಿಜ್ಞಾನಿಗಳ ಸಹಯೋಗದಲ್ಲಿ ಬೆಂಗಳೂರು ಜಲಮಂಡಳಿಯ ಎಂಜಿನಿಯರ್‌ಗಳು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ದೇಶೀಯ ತಂತ್ರಜ್ಞಾನವನ್ನು ರೂಪಿಸಿ, ಅಳವಡಿಸಿಕೊಂಡಿದ್ದಾರೆ. ಎರಡು ವಾರಗಳ ಹಿಂದೆ ಪ್ರಾರಂಭಿಸಲಾದ ಈ ಯೋಜನೆಯ ಮೂಲಕ  ಪ್ರತಿದಿನ ಸುಮಾರು 1 ಕೋಟಿ ಲೀಟರ್‌ನಷ್ಟು ‘ಝೀರೊ ಬ್ಯಾಕ್ಟೀರಿಯಲ್‌’ ಸಂಸ್ಕರಿಸಿದ ನೀರು ಉತ್ಪಾದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ವಿಪ್ರೊ ಕಂಪನಿ ಕೆಲವು ದಿನಗಳ ಹಿಂದೆ ಸಂಸ್ಕರಿಸಿದ ನೀರು ಸರಬರಾಜು ಮಾಡುವಂತೆ ಜಲಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ‘ಝೀರೊ ಬ್ಯಾಕ್ಟೀರಿಯಲ್‌’ ಉತ್ತಮ ಗುಣಮಟ್ಟದ ಸಂಸ್ಕರಿಸಿದ ನೀರನ್ನು ಗುರುವಾರದಿಂದ ಸರಬರಾಜು ಮಾಡಲಾಗುತ್ತಿದೆ. ಪ್ರತಿ ದಿನ 3 ಲಕ್ಷ ಲೀಟರ್‌ ನೀರು ಪೂರೈಸಲಾಗುತ್ತದೆ ಎಂದರು.

ಜಲಮಂಡಳಿ ನಿರ್ವಹಣಾ ವಿಭಾಗದ ಮುಖ್ಯ ಎಂಜಿನಿಯರ್  ಕುಮಾರ್ ನಾಯ್ಕ್, ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ನಾಗರಾಜ್‌, ರಾಹುಲ್‌ ಪ್ರಿಯದರ್ಶಿ, ಕೃಷ್ಣಕುಮಾರ್‌ ಉಪಸ್ಥಿತರಿದ್ದರು.

ಜಲಮಂಡಳಿ ಅಧ್ಯಕ್ಷರ ಫೋನ್‌ ಇನ್ ಇಂದು ಬೆಂಗಳೂರು: ಜಲಮಂಡಳಿ ಅಧ್ಯಕ್ಷ ಡಾ.ವಿ. ರಾಮ್‌ಪ್ರಸಾತ್ ಮನೋಹರ್ ಅವರೊಂದಿಗೆ ಮೇ 3ರಂದು ಶುಕ್ರವಾರ ಬೆಳಿಗ್ಗೆ 9.30ರಿಂದ 10:30ರವರೆಗೆ ನೇರ ಫೋನ್-ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ವಲಯ/ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಮತ್ತು ಒಳಚರಂಡಿ ಕೊಳವೆ/ಇಳಿ ಗುಂಡಿಯಿಂದ ತ್ಯಾಜ್ಯ ನೀರು ಹೊರಬರುತ್ತಿರುವ ಬಗ್ಗೆ ಜಲಮಾಪನ ಹಾಗೂ ನೀರಿನ ಬಿಲ್‌ನ ಸಮಸ್ಯೆಯ ಬಗ್ಗೆ ನೇರವಾಗಿ ಮಾತನಾಡಿ ಬಗೆಹರಿಸಿಕೊಳ್ಳಬಹುದು. ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಆರ್.ಆರ್. ಸಂಖ್ಯೆಯನ್ನು ತಿಳಿಸಿ ದೂರು ನೀಡಬಹುದಾಗಿದೆ. ದೂರವಾಣಿ 080-22945119 ಮತ್ತು 080-22229639.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT