ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಂದು ಲಕ್ಷ ವಸತಿ ಯೋಜನೆಯ ಮನೆಗಳ ದರ ಇಳಿಸಲು ಆಗ್ರಹ

Published 12 ಜನವರಿ 2024, 16:00 IST
Last Updated 12 ಜನವರಿ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದವರಿಗೆ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಯಲ್ಲಿ ನೀಡುವ ಮನೆಗಳ (1 ಬಿಎಚ್‌ಕೆ) ದರ ಕಡಿತಗೊಳಿಸುವಂತೆ ಮುಖ್ಯಮಂತ್ರಿಯವರಿಗೆ ಇಂಡಿಯನ್‌ ಫ್ರೀಡಂ ಪ್ಯಾಂಥರ್ಸ್‌ ಮನವಿ ಸಲ್ಲಿಸಿದೆ.

ಬ್ಯಾಂಕ್‌ ಸಾಲ ಪಡೆದರೆ ತಿಂಗಳಿಗೆ ₹ 8,000ದಿಂದ ₹ 10,000ವರೆಗೆ ಕಂತು ಕಟ್ಟಬೇಕಾಗುತ್ತದೆ. ಮನೆ ಪಡೆಯಲು ಇಚ್ಛಿಸುವ ಫಲಾನುಭವಿಗಳು ಬಡವರಾಗಿದ್ದು, ಅಷ್ಟು ದೊಡ್ಡ ಮೊತ್ತ ಪಾವತಿಸುವುದು ಕಷ್ಟವಾಗಲಿದೆ ಎಂದು ಇಂಡಿಯನ್‌ ಫ್ರೀಡಂ ಪ್ಯಾಂಥರ್ಸ್‌ ರಾಜ್ಯಾಧ್ಯಕ್ಷ ಅರುಣ್‌ ಕುಮಾರ್‌ ಡಿ. ಮತ್ತು ಹೋರಾಟಗಾರ್ತಿ ಬಿ.ಟಿ. ಲಲಿತಾ ನಾಯಕ್‌ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಬ್ಯಾಂಕ್‌ ಸಾಲ ಸುಲಭವಾಗಿ ದೊರೆಯುವಂತೆ ಮಾಡಬೇಕು. ಬಡ್ಡಿರಹಿತ ಸಾಲ ಒದಗಿಸಬೇಕು. ಸಿಬಿಲ್‌ ಸ್ಕೋರ್‌ ಇನ್ನಿತರ ನೆಪವೊಡ್ಡಿ ಸಾಲ ನಿರಾಕರಿಸಬಾರದು. ಜಿಎಸ್‌ಟಿ ಹಿಂಪಡೆಯಬೇಕು. ಸಾಲ ಮರುಪಾವತಿಯ ಕಂತು ₹ 3,000 ದಾಟಬಾರದು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT